ಉಡುಪಿ: ಕ.ರಾ.ರ.ಸಾ.ನಿಗಮವು ಉಡುಪಿ ಸುತ್ತಮುತ್ತಲಿನ 9 ದೇವಸ್ಥಾನಗಳನ್ನು ಸಂದರ್ಶಿಸಿ ಉಚ್ಚಿಲ ದಸರಾ ದರ್ಶನ
ಪ್ಯಾಕೇಜ್ ಪ್ರವಾಸ ಸೆ.30 ರಿಂದ ಅ.4ರವರೆಗೆ ಹಮ್ಮಿಕೊಂಡಿದೆ.ದರ್ಶನದ ಸ್ಥಳ ಹಾಗೂ ಪ್ರಯಾಣ ದರದ ವಿವರ ಈ ಕೆಳಗಿನಂತಿದೆ.
ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಬೆಳಗ್ಗೆ 8.30ಕ್ಕೆ ಹೊರಟು, 8.45ಕ್ಕೆ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ, 9.30ಕ್ಕೆ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನ, 10.15ಕ್ಕೆ ಅಂಬಲಪಾಡಿ ಶ್ರೀ ಮಹಾಕಾಳಿ ದೇವಸ್ಥಾನ, 11ಕ್ಕೆ ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, 12.15ಕ್ಕೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, 2.15ಕ್ಕೆ ನೀಲಾವರ ಶ್ರೀ ಮಹಿಷಮರ್ಧಿನಿ ದೇವಸ್ಥಾನ, 3ಕ್ಕೆ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನ, 4ಕ್ಕೆ ಕಾಪು ಶ್ರೀ ಮಾರಿಗುಡಿ ದೇವಸ್ಥಾನ, 5ಕ್ಕೆ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ, 6.30ಕ್ಕೆ ಉಡುಪಿ ಸಿಟಿ ಬಸ್ ನಿಲ್ದಾಣಕ್ಕೆ ಆಗಮಿಸಲಿದೆ.
ಈ ಪ್ಯಾಕೇಜ್ ಪ್ರವಾಸಕ್ಕೆ ಪ್ರತಿ ಪ್ರಯಾಣಿಕರಿಗೆ ಪ್ರಯಾಣ ದರ (ಊಟ ಉಪಹಾರ ಹೊರತು ವಯಸ್ಕರಿಗೆ ರೂ. 300/- ಮಕ್ಕಳಿಗೆ (ವರ್ಷದಿಂದ 12 ವರ್ಷದವರಿಗೆ) ರೂ. 250/ ಇರಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ: 7795984182 ಸಂಪರ್ಕಿಸಬಹುದು.
Kshetra Samachara
27/09/2022 01:12 pm