ಮಂಗಳೂರು: ಲಿವಾ ಮಿಸ್ ದಿವಾ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದ ತುಳುನಾಡ ಬೆಡಗಿ ದಿವಿತಾ ರೈ ಅವರಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.
ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ದಿವಿತಾ ರೈ ಅವರನ್ನು ಮಹಿಳೆಯರು ಪೂರ್ಣಕುಂಭದೊಂದಿಗೆ ಬರಮಾಡಿಕೊಂಡರು. ಸುಮಂಗಲಿಯರು ಆರತಿ ಬೆಳಗಿ, ತಿಲಕವಿಟ್ಟು, ಮಲ್ಲಿಗೆ ಹಾರವನ್ನು ಹಾಕಿ ದೀವಿಕಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಬಂಟರ ಮಾತೃ ಸಂಘ ಹಾಗೂ ಮಂಗಳೂರು ರಾಮಕೃಷ್ಣ ವಿದ್ಯಾರ್ಥಿನಿ ವಸತಿ ನಿಲಯದ ಅಮೃತೋತ್ಸವ ಸಮಿತಿ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ದಿವಿತಾ ರೈ ಅವರನ್ನು ತುಳುನಾಡಿನ ಸಂಪ್ರದಾಯದಂತೆ ವೀಳ್ಯದೆಳೆ, ಅಡಿಕೆ ನೀಡಿ, ಸೀರೆ, ಕೃಷ್ಣನ ಮೂರ್ತಿ ಕೊಟ್ಟು ಅಭಿನಂದಿಸಲಾಯಿತು .
ಮಂಗಳೂರು ನಗರದ ಅಂಬೇಡ್ಕರ್ ವೃತ್ತದಿಂದ ತೆರೆದ ವಾಹನದಲ್ಲಿ 23 ವರ್ಷದ ದಿವಿತಾ ರೈ ಅವರನ್ನು ಮೆರವಣಿಗೆಯಲ್ಲಿ ಬಂಟ್ಸ್ ಹಾಸ್ಟೆಲ್‌ನ ಗೀತಾ ಶೆಟ್ಟಿ ಮೆಮೊರಿಯಲ್ ಸಭಾಂಗಣದವರೆಗೆ ಕರೆತರಲಾಯಿತು. ಕೇರಳದ ಚೆಂಡೆಗಳು, ವಾದ್ಯಸಂಗೀತ, ಹುಲಿವೇಷ ಕುಣಿತ ಮೆರವಣಿಗೆಗೆ ಮೆರುಗು ನೀಡಿದವು.
PublicNext
07/09/2022 02:01 pm