ಕಾಪು: ಉಡುಪಿ ಮೂಲದ ಸಿನಿ ಶೆಟ್ಟಿ 2022ರ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನುಮುಡಿಗೇರಿಸಿಕೊಂಡಿದ್ದಾರೆ.ಕಾಪು ತಾಲೂಕಿನ ಈ ಚೆಲುವೆ ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದಿದ್ದರೂ ಕರ್ನಾಟಕದವರು ಎಂಬುದು ರಾಜ್ಯವೇ ಹೆಮ್ಮೆ ಪಡುವ ವಿಷಯ.
ಭಾನುವಾರ ,ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಫಿನಾಲೆಯಲ್ಲಿ ಸಿನಿ ಶೆಟ್ಟಿ ಮಿಸ್ ಇಂಡಿಯಾ ಕಿರೀಟಕ್ಕೆ ಮುತ್ತಿಟ್ಟಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆಯವರಾದ ಸಿನಿ ಶೆಟ್ಟಿ, ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ಪ್ರಸ್ತುತ ಅವರು ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್ ಕೋರ್ಸ್ ಮಾಡುತ್ತಿದ್ದಾರೆ. ಈಕೆ ಊರಿಗೆ ಬರುವುದು ವರ್ಷಕ್ಕೊಮ್ಮೆ ಮಾತ್ರವಂತೆ.ಮನೆ ಮಗಳು ಮಿಸ್ ಇಂಡಿಯಾ ಆಗಿಹೊರಹೊಮ್ಮಿರುವುದು ಕುಟುಂಬಸ್ಥರ ಖುಷಿಗೆ ಕಾರಣವಾಗಿದೆ.ಇವರ ತಂದೆ ಸದಾನಂದ ಶೆಟ್ಟಿ, ಮತ್ತು ತಾಯಿ ಹೇಮ ಶೆಟ್ಟಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದು ಹೊಟೇಲು ಉದ್ಯಮ ನಡೆಸುತ್ತಿದ್ದಾರೆ.ಈ ಚೆಲುವೆ ಅಪರೂಪದ ಸೌಂದರ್ಯ ಕಿರೀಟಕ್ಕೆ ಪಾತ್ರವಾಗಿರುವುದು ಕೇವಲ ಅವರ ಮನೆಯಲ್ಲಿ ಮಾತ್ರವಲ್ಲ ,ಊರಲ್ಲೇ ಸಂಭ್ರಮಕ್ಕೆ ಕಾರಣವಾಗಿದೆ.
PublicNext
04/07/2022 10:19 pm