ಮಂಗಳೂರು: ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಸಿಂಹದ ವೇಷ ತೊಡೋದು ನಾವು ನೋಡಿದ್ದೀವಿ. ಆದರೆ ಇದೀಗ ಮಾಡೆಲ್ ಒಬ್ಬರು ಸಿಂಹಿಣಿ ಅವತಾರ ಪಡೆದಿರುವುದು ಕರಾವಳಿ ಮಾತ್ರವಲ್ಲದೆ, ರಾಜ್ಯಮಟ್ಟದಲ್ಲೂ ಸಖತ್ ಸುದ್ದಿಯಾಗಿದೆ. ಅಂದಹಾಗೆ ಇದೆಲ್ಲವೂ ಸಾಧ್ಯವಾಗಿದ್ದು ನಗರದ ಬೆಂದೂರ್ ವೆಲ್ ಬಳಿ ಇರುವ ಚೇತನಾ'ಸ್ ಬ್ಯೂಟಿ ಲಾಂಜ್ ನಲ್ಲಿ . ಇದರ ಮಾಲಕಿ ಹಾಗೂ ಸ್ವತಃ ಬ್ಯೂಟಿಶಿಯನ್ ಆಗಿರುವ ಚೇತನಾ ಅವರೇ ಈ ರೀತಿಯಾಗಿ ಮಾಡೆಲ್ ಗೆ ಸಿಂಹ ರೂಪ ನೀಡಿದ್ದಾರೆ. ತನ್ನಲ್ಲಿರುವ ಕಲಾ ನೈಪುಣ್ಯತೆಗಾಗಿ ಚೇತನಾ ಶಿವಮೊಗ್ಗ ಮೂಲದ ಮಾಡೆಲ್ ಶ್ರೇಯಾ ಭಟ್ ಮುಖದಲ್ಲಿಯೇ ಈ ಸಿಂಹಿಣಿ ರೂಪ ಮೂಡುವಂತೆ ಮಾಡಿದ್ದಾರೆ.
ವಿದೇಶಗಳಲ್ಲಿ ಹೆಚ್ಚಾಗಿ ಮಾಡುವ ಪೇಸ್ ಪೈಂಟಿಂಗ್ ಮಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಇದಕ್ಕಾಗಿ ಸತತ 5 ಗಂಟೆ ಮೇಕಪ್ ಮಾಡಿ ಸಿಂಹದ ಕಳೆ ಕೊಟ್ಟಿದ್ದಾರೆ. ಕ್ರೇಝ್ ಗಾಗಿ ಫೋಟೊ ಶೂಟ್ ನಡೆಸಿ ಜಾಲತಾಣಕ್ಕೆ ಅಪ್ಲೋಡ್ ಮಾಡ್ತಿದ್ದಂತೆ ರಾತ್ರಿ ಬೆಳಗಾಗೊದರೊಳಗೆ ಚೇತನಾ ನೀಡಿದ ಸಿಂಹಿಣಿ ಸ್ಪರ್ಶ ಭಾರಿ ವೈರಲ್ ಆಗಿದೆ. ಈ ಹಿಂದೆಯೂ ಇಂತಹ ಹಲವು ಮೇಕಪ್ ಮಾಡಿ ಚೇತನಾ ಸೈ ಎನಿಸಿದ್ದಾರೆ. ಈ ಸಿಂಹದ ಮೇಕಪ್ ನಲ್ಲಿ ಕಣ್ಣು ಮುಚ್ಚಿ ಹುಬ್ಬುಗಳಿಗೆ ವ್ಯಾಕ್ಸ್ ಹಚ್ಚಿ ಅದರ ಮೇಲೆ ಸಿಂಹದ ಕಣ್ಣನ್ನು ಚಿತ್ರಿಸಲಾಗಿದೆ. ಶ್ರೇಯಾರ ತಲೆ ಕೂದಲನ್ನೆ ಬಳಸಿ ಸಿಂಹದ ಮುಖದ ಸುತ್ತಲಿನ ಕೂದಲನ್ನಾಗಿ ಪರಿವರ್ತಿಸಲಾಗಿದೆ. ಮೇಕ್ ಅಪ್ ಮುಗಿದ ಬಳಿಕ ಅಲ್ಲಿದ್ದವರೇ ನಿಜವಾದ ಸಿಂಹ ಅಂತಾ ಹೆದರಿಕೊಂಡಿದ್ದೂ ಇದೆಯಂತೆ. ಏನೇ ಆಗಲಿ, ದೇಶ- ವಿದೇಶ ಸುತ್ತಿ ತಾನು ಕಲಿತ ವಿದ್ಯೆಯಿಂದ ಹೊಸತನದ ರೂಪ ನೀಡುತ್ತಿರುವ ಚೇತನಾ ಅವರಿಗೆ ಹ್ಯಾಟ್ಸಾಪ್ ಎನ್ನಲೇಬೇಕು.
Kshetra Samachara
08/11/2020 11:31 am