ಉಡುಪಿ: ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ತಪ್ಪಾಗಿ ಅರ್ಥೈಸಿಕೊಂಡಿದೆ.
ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಈ ಕೆಳಗಿನಂತೆ ಸ್ಪಷ್ಟವಾಗಿ ಹೇಳಿದೆ.
“ಈ ಎಲ್ಲಾ ಅರ್ಜಿಗಳ ಬಾಕಿ ಉಳಿದಿರುವ ವಿಚಾರಣೆಯನ್ನು ಪರಿಗಣಿಸಿಕೊಂಡು, ವಿದ್ಯಾರ್ಥಿಗಳು ಯಾವುದೇ ಧರ್ಮ ಅಥವಾ ನಂಬಿಕೆಯನ್ನು ಅನುಸರಿಸುವವರಾಗಿದ್ದರೂ, ಕೇಸರಿ ಶಾಲು (ಭಗವಾ), ಸ್ಕಾರ್ಫ್ಗಳು, ಹಿಜಾಬ್, ಧಾರ್ಮಿಕ ಧ್ವಜಗಳು ಅಥವಾ ತರಗತಿಯೊಳಗೆ ಧರಿಸುವುದನ್ನು ಮುಂದಿನ ಆದೇಶದ ವರೆಗೆ ನಾವು ನಿರ್ಬಂಧಿಸುತ್ತೇವೆ.”
“ಕಾಲೇಜು ಅಭಿವೃದ್ಧಿ ಸಮಿತಿಗಳ ಮೂಲಕ ವಿದ್ಯಾರ್ಥಿಗಳ ವಸ್ತ್ರ ಸಂಹಿತೆ/ಸಮವಸ್ತ್ರವನ್ನು ನಿರ್ಧರಿಸಿರುವ ಸಂಸ್ಥೆಗಳಿಗೆ ಮಾತ್ರವೇ ಈ ಆದೇಶ ಅನ್ವಯಿಸುತ್ತದೆ ಎಂಬುದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ.”
ಮೇಲೆ ತಿಳಿಸಲಾದ ಮಧ್ಯಂತರ ಆದೇಶದ ಅಂಶವು ರಾಜ್ಯ ಸರಕಾರದ ಮೂಲಕ ಆದೇಶಿಸಿ ಅನುಷ್ಠಾನಗೊಳಿಸಲು ಆದೇಶ ಅಥವಾ ನಿರ್ದೇಶನ ನೀಡುವುದಿಲ್ಲ. ಆದೇಶವು ವಿಶೇಷವಾಗಿ ವಿದ್ಯಾರ್ಥಿಗಳ ವಸ್ತ್ರ ಸಂಹಿತೆ/ಸಮವಸ್ತ್ರವನ್ನು ಗೊತ್ತುಪಡಿಸಿರುವ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಆದರೆ ಮೇಲೆ ಹೇಳಲಾದ ಅದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಶಿಕ್ಷಣ ಇಲಾಖೆಯು ಇದನ್ನು ಖಾಸಗಿ ಶಾಲೆಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ತಪ್ಪಾಗಿ ಅನುಷ್ಠಾನಗೊಳಿಸುತ್ತಿದೆ. ಆದ್ದರಿಂದ ಹಿಜಾಬ್ ನ್ನು ಬಲವಂತವಾಗಿ ಕಳಚಲು ಅನಿವಾರ್ಯಪಡಿಸದಂತೆ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕೆಂದು ಉಡುಪಿಯ ಪೋಷಕರು ಡಿಸಿಗೆ ಮನವಿ ಸಲ್ಲಿಸಿದ್ದಾರೆ.
Kshetra Samachara
16/02/2022 08:38 pm