ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ವಾರ ತೆರಿಗೆ ಪಾವತಿಸದೆ ಓಡಾಡುತ್ತಿದ್ದ 25-30 ಬಸ್‌ಗಳ ಮುಟ್ಟುಗೋಲು: ಆರ್ ಟಿಓ

ಉಡುಪಿ: ಉಡುಪಿ ಪ್ರಾದೇಶಿಕ ಸಾರಿಗೆ ಕಛೇರಿಯಿಂದ 2021- 22ನೇ ಸಾಲಿನ ಆರ್ಥಿಕ ವರ್ಷದಲ್ಲಿ 151ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನೀಡಲಾಗಿದ್ದು, ಜನವರಿ 27ರ ವರೆಗೆ 105.70ಕೋಟಿ ರೂ. ರಾಜಸ್ವ ಸಂಗ್ರಹ ಮಾಡಲಾಗಿದೆ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನದಲ್ಲಿ ನಡೆದ ತಿಂಗಳ ಮಾಧ್ಯಮ ಸಂವಾದದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಆರ್‌ಟಿಓ ಇಲಾಖೆಯನ್ನು ಶೇ.100ರಷ್ಟು ಕಾಗದ ರಹಿತ ಇಲಾಖೆ ಮಾಡುವುದು ತುಂಬ ಕಷ್ಟ. ಆರ್‌ಸಿ ಸ್ಮಾರ್ಟ್ ಕಾರ್ಡ್‌ನಲ್ಲಿ ಲೋಪ ದೋಷಗಳು ಮತ್ತು ಸಾಕಷ್ಟು ದಂಧೆಗಳು ನಡೆಯುತ್ತಿರುವುದರಿಂದ ರಾಜ್ಯ ಸರಕಾರದ ಆದೇಶದಂತೆ ಕಳೆದ ನವೆಂಬರ್ ತಿಂಗಳಿನಿಂದ ಪೇಪರ್ ಶೀಟ್ ಮೂಲಕವೇ ಆರ್‌ಸಿ ನೀಡುತ್ತಿದ್ದೇವೆ ಎಂದು ಆರ್‌ಟಿಓ ತಿಳಿಸಿದರು.

ಈ ವಾರದಲ್ಲಿ ತೆರಿಗೆ ಪಾವತಿಸದೆ ಓಡಾಡುತ್ತಿದ್ದ 25-30 ಬಸ್‌ಗಳನ್ನು ಮುಟ್ಟುಗೋಲು ಹಾಕಲಾಗಿದೆ. ಅಪಘಾತದಿಂದ ಸಂಪೂರ್ಣ ನಿರುಪಯುಕ್ತವಾದ ವಾಹನಗಳನ್ನು ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಅದು ಗುಜರಿ(ಸ್ಕ್ರಾಬ್)ಗೆ ಅರ್ಹವಾಗಿರುತ್ತದೆ. ಈ ಸಂಬಂಧ ಇನ್ಸೂರೆನ್ಸ್ ಕಂಪೆನಿಗಳಿಗೆ ಸ್ಪಷ್ಟ ಸೂಚನೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.

Edited By :
Kshetra Samachara

Kshetra Samachara

29/01/2022 08:01 pm

Cinque Terre

5.9 K

Cinque Terre

0

ಸಂಬಂಧಿತ ಸುದ್ದಿ