ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವೀಕೆಂಡ್ ಕರ್ಫ್ಯೂ ; ಪೊಲೀಸರು ಫುಲ್ ಅಲರ್ಟ್, ಬಿಗಿ ವಾಹನ ತಪಾಸಣೆ

ಮಂಗಳೂರು: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ‌ನಗರಾದ್ಯಂತ ವಾಹನ ತಪಾಸಣೆ ಚುರುಕುಗೊಳಿಸಲಾಗಿದ್ದು, ಸ್ವತಃ ಫೀಲ್ಡಿಗಿಳಿದ ಡಿಸಿಪಿ ಹರಿರಾಂ ಶಂಕರ್ ಕಾರ್ಯಾಚರಣೆ ಮಾಡ್ತಿದ್ದಾರೆ. ಕ್ಲಾಕ್ ಟವರ್, ಕೆಪಿಟಿ ಸೇರಿ 36 ಕಡೆ ಚೆಕ್ ಪೋಸ್ಟ್ ಇಡಲಾಗಿದೆ. ಅನಗತ್ಯ ಓಡಾಡುವ ವಾಹನ, ಮಾಸ್ಕ್ ಹಾಕದ ಸವಾರರಿಗೆ ಫೈನ್ ಹಾಕಲಾಗ್ತಿದೆ. ಪ್ರಮುಖ ಸರ್ಕಲ್ ಗಳಲ್ಲಿ ಬ್ಯಾರಿಕೇಡ್ ಎಳೆದು ಬಿಗಿ ತಪಾಸಣೆ ಮಾಡಲಾಗ್ತಿದ್ದು, ಮತ್ತೆ ಮತ್ತೆ ನಿಯಮ ಮೀರಿದ್ರೆ ವಾಹನ ಸೀಝ್ ಮಾಡೋ ವಾರ್ನಿಂಗ್ ನೀಡಲಾಗುತ್ತಿದೆ.

ಇನ್ನು, ಹಣ್ಣು-ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಅಷ್ಟಿಲ್ಲ. ಜಿಲ್ಲೆಯಲ್ಲಿ ಖಾಸಗಿ, ಸರ್ಕಾರಿ ಬಸ್ ಸಂಚಾರ ಯಥಾಸ್ಥಿತಿಯಿದೆ. ಬಸ್ ಗಳಲ್ಲಿ ಬೆರಳೆಣಿಕೆ ಪ್ರಯಾಣಿಕರು ಸಂಚರಿಸ್ತಿದ್ದಾರೆ. ಕ್ಲಾಕ್ ಟವರ್ ಸರ್ಕಲ್ ನಲ್ಲಿ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸ್ತಿದ್ದು, ಬಸ್ಸು, ಕಾರು, ದ್ವಿಚಕ್ರ ವಾಹನ ತಡೆದು ಮಾಸ್ಕ್ ಇಲ್ಲದವರಿಗೆ ಫೈನ್ ಹಾಕ್ತಿದ್ದಾರೆ. ಖಾಸಗಿ ಬಸ್ಸು ಚಾಲಕರು, ನಿರ್ವಾಹಕರು, ಪ್ರಯಾಣಿಕರಿಗೂ ದಂಡ ವಿಧಿಸಲಾಗ್ತಿದೆ.

ಬಸ್ಸುಗಳಲ್ಲಿ ಸಾಮಾಜಿಕ ಅಂತರ ಪಾಲಿಸದ ಹಾಗೂ ಮಾಸ್ಕ್ ಹಾಕದ ಪಾದಚಾರಿಗಳಿಗೆ ಅಧಿಕಾರಿಗಳು ದಂಡ ಹಾಕುತ್ತಿದ್ದಾರೆ. ಹಂಪನಕಟ್ಟೆ, ಕ್ಲಾಕ್ ಟವರ್ ಬಳಿ ಫುಲ್ ಟ್ರಾಫಿಕ್ ಜಾಮ್ ಆಗಿದೆ. ನಗರ ಪ್ರವೇಶಿಸುವ ವಾಹನ ಸೀಝ್ ಮಾಡಲಾಗುತ್ತಿದ್ದು, ಅನಗತ್ಯ ಓಡಾಟದ ಹತ್ತಾರು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಪಾರ್ಸೆಲ್ ಬದಲಿಗೆ ಗ್ರಾಹಕರಿಗೆ ಕುಳಿತು ತಿನ್ನಲು ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಕ್ಲಾಕ್ ಟವರ್, ಹಂಪನಕಟ್ಟೆಯಲ್ಲಿ ಹೊಟೇಲ್ ಗಳಿಗೂ ದಾಳಿ ನಡೆಯಿತು.

Edited By : Nagesh Gaonkar
Kshetra Samachara

Kshetra Samachara

08/01/2022 01:35 pm

Cinque Terre

12.9 K

Cinque Terre

2