ಉಡುಪಿ: ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಹಿಜಾಬ್ ಹಾಕಿ ಬರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವ ಘಟನೆ ನಡೆದಿದೆ.ಪರಿಣಾಮವಾಗಿ ಈ ವಿದ್ಯಾರ್ಥಿನಿಯರು ಮೂರು ನಾಲ್ಕು ದಿನಗಳಿಂದ ತರಗತಿಯ ಹೊರಗೇ ನಿಲ್ಲುವಂತಾಗಿದೆ.ಕಾಲೇಜು ಪ್ರಾಂಶುಪಾಲರಾದ ರುದ್ರೆಗೌಡ ಅವರು,ನಮ್ಮಲ್ಲಿ ಈವರೆಗೆ ಹಿಜಾಬ್ ಹಾಕಿಕೊಂಡು ತರಗತಿಗೆ ಹಾಜರಾಗುವ ನಿಯಮ ಇರಲಿಲ್ಲ. ಕಳೆದ ಮೂರು ದಿನಗಳಿಂದ ಸುಮಾರು 60 ಮುಸ್ಲಿಮ್ ವಿದ್ಯಾರ್ಥಿನಿಯರಲ್ಲಿ ಕೆಲವು ಮಂದಿ ಮಾತ್ರ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಇವರ ಮನೆಯವರನ್ನು ಕರೆದು ಮಾತುಕತೆ ಮಾಡಿದ್ದೇವೆ. ಅವರೆಲ್ಲ ಅರ್ಥ ಮಾಡಿಕೊಂಡು ಒಪ್ಪಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ ವಿದ್ಯಾರ್ಥಿನಿಯರು ಮಾತ್ರ ,ನಮ್ಮ ಅಟೆಂಡೆನ್ಸ್ ಹೋಗುತ್ತಿದೆ.ನಮಗೆ ಕ್ಲಾಸ್ ಒಳಗೆ ಕೂರಲು ಬಿಡುತ್ತಿಲ್ಲ.ಪೋಷಕರು ಅವರ ಕೆಲಸ ಕಾರ್ಯ ಬಿಟ್ಟು ಕಾಲೇಜಿಗೆ ಬಂದು ಮಾತನಾಡಿದರೂ ನಮ್ಮ ಸಮಸ್ಯೆ ಬಗೆಹರಿದಿಲ್ಲ.ನಮ್ಮ ಕಲಿಕೆಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.
PublicNext
31/12/2021 05:10 pm