ಮಂಗಳೂರು: ಒಮಿಕ್ರಾನ್ ಭೀತಿಯಿಂದಾಗಿ ರಾಜ್ಯಾದ್ಯಂತ ರಾತ್ರಿ ಹತ್ತು ಗಂಟೆ ನಂತರ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ
ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿಯೂ ಕಟ್ಟುನಿಟ್ಟಾಗಿ ಕರ್ಫ್ಯೂ ಜಾರಿಯಾಗಿದ್ದು, ಕೆಲ ಅವಶ್ಯಕ ವ್ಯವಹಾರ ಹೊರತುಪಡಿಸಿ ನಗರದ ಪ್ರಮುಖ ಕಡೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಹತ್ತು ಗಂಟೆ ವೇಳೆಗೇ ಅಂಗಡಿ- ಹೋಟೆಲ್ ಗಳು ಬಂದ್ ಆಗಿತ್ತು. ನಗರದೊಳಗೆ ಪೊಲೀಸರಿಂದ ಬಿಗಿ ತಪಾಸಣೆ ನಡೆಯಿತು. ಕೆಲವೊಂದು ಕಡೆಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
Kshetra Samachara
29/12/2021 08:13 am