ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ಕೊರಗ ಸಮುದಾಯದ ಮೇಲೆ ಪೊಲೀಸ್ ದೌರ್ಜನ್ಯ: ಎಪಿಸಿಆರ್ ನಿಯೋಗ ಭೇಟಿ

ಕೋಟ: ಕೊರಗ ಸಮುದಾಯದ ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸರು ನುಗ್ಗಿ ಲಾಠಿಚಾರ್ಜ್ ಮಾಡಿ ದೌರ್ಜನ್ಯವೆಸಗಿದ ಮನೆಗೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಇದರ ಜಿಲ್ಲಾ ನಿಯೋಗ ಭೇಟಿ ನೀಡಿತು.

ನಿಯೋಗವು ಲಾಠಿಚಾರ್ಜ್ ದೌರ್ಜನ್ಯಕ್ಕೊಳಗಾದ ಸಂತ್ರಸ್ಥರ ಬಳಿ ಘಟನೆಯ ವಿವರಣೆಯನ್ನು ಪಡೆದುಕೊಂಡಿತು. ಘಟನೆಯಲ್ಲಿ ಮದುಮಗ ಸೇರಿದಂತೆ ವೃದ್ದರು ಮಹಿಳೆಯರು, ಮಕ್ಕಳು ಗಾಯಗೊಂಡಿರುವುದು ಗಮನಕ್ಕೆ ಬಂದಿದೆ.

ಪೊಲೀಸರ ದೌರ್ಜನ್ಯದ ಸಾಕ್ಷ್ಯ ದಾಖಲೀಕರಣ ಮಾಡಿ ರಾಜ್ಯ ಮಾನವ ಹಕ್ಕು ಆಯೋಗ, ಸಮಾಜ ಕಲ್ಯಾಣ ಇಲಾಖೆ ಗಮನಕ್ಕೆ ತರುವುದಾಗಿ ಈ ಸಂದರ್ಭದಲ್ಲಿ ತಿಳಿಸಲಾಯಿತು. ಹಾಗೂ ದೌರ್ಜನ್ಯಕ್ಕೊಳಗಾಗದ ಕುಟುಂಬಕ್ಕೆ ಪರಿಹಾರ ನೀಡಲು ಸರಕಾರವನ್ನು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ನಿಯೋಗದಲ್ಲಿ ಹಸನ್ ಮಾವಡ್, ಇದ್ರಿಸ್ ಹೂಡೆ, ಇಬ್ರಾಹಿಮ್ ಸಯೀದ್ ಮತ್ತು ಯಾಸೀನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

28/12/2021 06:04 pm

Cinque Terre

5.07 K

Cinque Terre

0

ಸಂಬಂಧಿತ ಸುದ್ದಿ