ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾನೂನು ಹೋರಾಟದಲ್ಲಿ ಉಡುಪಿ ಮೂಲದ ವ್ಯಕ್ತಿಗೆ ಸೌದಿ ನ್ಯಾಯಾಲಯದಲ್ಲಿ ಜಯ

ಉಡುಪಿ: ಸೌದಿ ಅರೇಬಿಯಾದ ರಿಯಾದ್ ನ ಕಂಪೆನಿಯೊಂದರಲ್ಲಿ ಈ ಹಿಂದೆ ಉದ್ಯೋಗಿಯಾಗಿದ್ದ ಉಡುಪಿ ಮೂಲದ ವ್ಯಕ್ತಿ, ಒಂದು ವರ್ಷಕ್ಕೂ ಅಧಿಕ ಕಾಲ ಕಾರ್ಮಿಕ ಪ್ರಕರಣದ ಕಾನೂನು ಹೋರಾಟದಲ್ಲಿ ರಿಯಾದ್ ನ್ಯಾಯಾಲಯದಲ್ಲಿ ಜಯಕಂಡಿದ್ದಾರೆ.

ಉಡುಪಿಯ ಕಲ್ಯಾಣಪುರದವರಾದ ಮೆಲ್ವಿನ್ ಮೆನೆಜಸ್ ಅವರು ಹಲವಾರು ವರ್ಷಗಳಿಂದ ರಿಯಾದ್ ಮೂಲದ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಂಪನಿಯು, ಇತರ ಉದ್ಯೋಗಿಗಳೊಂದಿಗೆ ಮೆಲ್ವಿನ್ ರವರ ಮಾಸಿಕ ಸಂಬಳ ಮತ್ತು ಇತರ ಸವಲತ್ತುಗಳನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಪಾವತಿಸದೆ, ತೆಗೆದಿಟ್ಟುಕೊಂಡಿತ್ತು. ಪಾವತಿ ಬಾಕಿ ಉಳಿದಿರುವ ವೇತನಗಳು ಮತ್ತು ಇತರ ಸವಲತ್ತುಗಳನ್ನು ಪಡೆಯಲು ಸೌದಿಯ ನ್ಯಾಯವಾದಿಯವರನ್ನು ನೇಮಿಸುವ ಮೂಲಕ ನ್ಯಾಯಾಲಯವನ್ನು ಸಂಪರ್ಕಿಸಲು, ಉಡುಪಿ ಜಿಲ್ಲೆಯ ಸೌದಿಯ ರಾಜಧಾನಿ ರಿಯಾದ್ ನಲ್ಲಿರುವ ಸಮಜಸೇವಕರೂ, ವಕೀಲರೂ/ಕಾನೂನು ಸಲಹೆಗಾರೂ ಹಾಗೂ ಮಾಜಿ ಉಡುಪಿ ತಾಲೂಕು ಪಂಚಾಯತು ಸದಸ್ಯರೂ ಆದ ಪಡುಬಿದ್ರಿಮೂಲದ ಪಿ.ಎ. ಹಮೀದ್ ಪಡುಬಿದ್ರಿರವರು ಅವರಿಗೆ ನೆರವುನೀಡಿ, ನ್ಯಾಯಾಲಯ ಹೋರಾಟದುದ್ದಕ್ಕೂ ಸಹಾಯ ನೀಡಿದರು.

ಅದರಂತೆ, ಕಾರ್ಮಿಕ ನ್ಯಾಯಾಲಯದಲ್ಲಿ ಮೆಲ್ವಿನ್ ಅವರ ಪ್ರಕರಣವನ್ನು ಪ್ರತಿನಿಧಿಸಲು ಡಾ. ಬ್ರೈಕ್ ಆಯೆದ್ ಅಲ್-ಕರ್ನಿ ಎಂಬ ವಕೀಲರನ್ನು ನೇಮಿಸಲಾಯಿತು.

ಪ್ರಸ್ತುತ ನ್ಯಾಯಾಲಯ, ಕಂಪೆನಿಯ ಹಾಗೂ ಮೆಲ್ವಿನ್ ಅವರ ಪ್ರಕರಣದ ವಿಚಾರಣೆ ನಡೆಸಿ ನಂತರ ವಿನಾಕಾರಣವಾಗಿ ಹಕ್ಕುಗಳನ್ನು ತಡೆದಿಟ್ಟಿದ್ದ ಕಂಪೆನಿಯ ತಪ್ಪನ್ನು ಎತ್ತಿಹಿಡಿಯಿತಲ್ಲದೆ, ಮೆಲ್ವಿನ್‌ರವರಿಗೆ ಸೌದಿ ರಿಯಾಲ್‌ ಮೊತ್ತ 1,90,000 ಪಾವತಿಸಲು ಕಂಪನಿಗೆ ಆದೇಶಿಸಿತು. ಕಂಪನಿಯು ಆದೇಶಿಸಿತ ಮೊತ್ತದ ಚೆಕ್ ಅನ್ನು ನ್ಯಾಯಾಲಯಕ್ಕೆ ಠೇವಣಿ ಮಾಡಿದ್ದು, ಅದನ್ನು ನ್ಯಾಯಾಲಯವು ಮೆಲ್ವಿನ್‌ರವರಿಗೆ ಹಸ್ತಾಂತರಿಸಿತು. ಅಲ್ಲದೆ ತಮ್ಮ ಪ್ರಾಯೋಜಕತ್ವವನ್ನು ಪ್ರಸ್ತುತ ಕಂಪನಿಯಿಂದ ಹೊಸ ಕಂಪನಿಗೆ ವರ್ಗಾಯಿಸುವ ಮುಖೇನ ಮೆಲ್ವಿನ್ ರವರು ಜಯಗಳಿಸಿದರು.

Edited By :
PublicNext

PublicNext

28/12/2021 12:09 pm

Cinque Terre

26.64 K

Cinque Terre

1