ಉಡುಪಿ: ನಾಳೆಯಿಂದ(ಡಿ.28) ರಾಜ್ಯಾದ್ಯಂತ ನೈಟ್ ಕರ್ಪ್ಯೂ ಜಾರಿಯಾಗುತ್ತಿದೆ.ಇನ್ನೊಂದೆಡೆ ಹೊಸ ವರ್ಷಕ್ಕೆ ದಿನಗಣನೆ ಆರಂಭಗೊಂಡಿದೆ.ಈ ಹಿನ್ನೆಲೆಯಲ್ಲಿ ನಾಳೆಯಿಂದ ಏನೆಲ್ಲ ನಿರ್ಬಂಧಗಳಿವೆ ಎಂಬ ಕುರಿತು ಮಾಹಿತಿ ನೀಡಲು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಸುದ್ದಿಗೋಷ್ಟಿ ನಡೆಸಿದರು.
ಮದುವೆ, ಸಭೆ ಸಮಾರಂಭಗಳಲ್ಲಿ 300 ಜನಕ್ಕಿಂತ ಹೆಚ್ಚು ಸೇರುವಂತಿಲ್ಲ .ಡಿ.30ರಿಂದ ಜ. 2ರ ವರೆಗೆ ಬಾರ್,ಪಬ್, ರೆಸ್ಟೋರೆಂಟ್ ಗಳಲ್ಲಿ ಶೇ.50ರಷ್ಟು ಗ್ರಾಹಕರಿಗೆ ಮಾತ್ರ ಸೇವೆ ನೀಡಲು ಅವಕಾಶವಿದೆ. ಡಿ.28 ರಿಂದ ನೈಟ್ ಕರ್ಫ್ಯೂ ಸಂದರ್ಭದಲ್ಲಿ ಅಗತ್ಯ ಸೇವೆಗಳಿಗೆ ಹೊರತು ಪಡಿಸಿ ಬೇರೆ ಯಾವುದೇ ಸಭೆ, ಸಮಾರಂಭ ನಡೆಸುವಂತಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಎಂ.ಕೂರ್ಮ ರಾವ್ ಆದೇಶ ಹೊರಡಿಸಿದ್ದಾರೆ.ಡಿ.ಸಿ ಸುದ್ದಿಗೋಷ್ಠಿಯ ಮಾಹಿತಿ ಇಲ್ಲಿದೆ.
Kshetra Samachara
27/12/2021 05:27 pm