ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಾಮಾನ್ಯ ಜನಜೀವನಕ್ಕೆ ಪೊಲೀಸ್ ಮಾನ್ಯತೆ; 1, 256 ಮಂದಿಯ 'ರೌಡಿಶೀಟರ್ ಪಟ್ಟ' ರದ್ದು!

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 1,256 ಮಂದಿಯ 'ರೌಡಿಶೀಟರ್ ಪಟ್ಟ' ವನ್ನು ಪೊಲೀಸ್ ಇಲಾಖೆ ರದ್ದು ಗೊಳಿಸಿದೆ. ಈ ಮೂಲಕ ಅವರಿಗೆ ಸಾಮಾನ್ಯ ಜನರಂತೆ ಜೀವನ ಮಾಡಲು ಅವಕಾಶ ನೀಡಲಾಗಿದೆ.

ಈ ರೌಡಿಶೀಟರ್ ಗಳಿಗೆ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಪರಿವರ್ತನಾ ಸಭೆಯನ್ನು ಆಯೋಜಿಸಲಾಗಿತ್ತು. 5 ವರ್ಷಗಳ ಕಾಲ ಯಾವುದೇ ಪ್ರಕರಣಗಳಲ್ಲಿ ಕೇಸು ದಾಖಲಾಗದವರು, ವಯಸ್ಸಾದವರು, ಅತ್ಯಂತ ಜವಾಬ್ದಾರಿಯಿಂದ ಕುಟುಂಬ ಹಾಗೂ ಸಮಾಜದಲ್ಲಿ ತೊಡಗಿಸಿಕೊಂಡವರ ಮೇಲಿನ ರೌಡಿಶೀಟರ್ ಹಣೆಪಟ್ಟಿ ಕ್ಲೋಸ್ ಮಾಡಲಾಗಿದೆ.

ಈ ಬಗ್ಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾತನಾಡಿ, ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 3,263 ಮಂದಿ ರೌಡಿಶೀಟರ್ ಗಳಿದ್ದಾರೆ. ಇವರಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗವಹಿಸದೆ, ಉತ್ತಮ ನಡತೆಯಿಂದ ಗುರುತಿಸಿಕೊಂಡಿರುವ 1,256 ಮಂದಿಯ 'ರೌಡಿಶೀಟರ್ ' ರದ್ದುಗೊಳಿಸಲಾಗಿದೆ. ಸಾಕಷ್ಟು ಶ್ರಮ ವಹಿಸಿ ಕಳೆದ 3 ತಿಂಗಳಿನಿಂದ ಪೊಲೀಸ್ ಅಧಿಕಾರಿಗಳು ದಿನದ 2-3 ಗಂಟೆ ವ್ಯಯಿಸಿ 'ರೌಡಿ ಪಟ್ಟ' ರದ್ದುಗೊಳಿಸುವ ರೌಡಿಶೀಟರ್ ಗಳನ್ನು ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ 7-8 ಸಭೆಗಳನ್ನು ನಡೆಸಿ ಈ ಆಯ್ಕೆ ಪಟ್ಟಿ ತಯಾರಿಸಲಾಗಿದೆ ಎಂದರು.

Edited By : Manjunath H D
Kshetra Samachara

Kshetra Samachara

16/12/2021 05:34 pm

Cinque Terre

10.71 K

Cinque Terre

1

ಸಂಬಂಧಿತ ಸುದ್ದಿ