ಉಡುಪಿ: ಉಡುಪಿ ಪ್ರವಾಸದಲ್ಲಿರುವ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ ಅವರು ನಗರದ ಬೋರ್ಡ ಹೈಸ್ಕೂಲ್ ಗೆ ಭೇಟಿ ನೀಡಿದರು. ವಿದ್ಯಾರ್ಥಿಗಳ ಜೊತೆ ಕೆಲಕಾಲ ಸಂವಾದ ನಡೆಸಿದರು. ಮುಖ್ಯವಾಗಿ ಮಕ್ಕಳಿಗೆ ಮಾಸ್ಕ್ ಧರಿಸಬೇಕಾದ ಅಗತ್ಯತೆ ಬಗ್ಗೆ ಮತ್ತು ಸಾಮಾಜಿಕ ಅಂತರ ಕಾಪಾಡುವ ಬಗ್ಗೆ ತಿಳಿಹೇಳಿದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಸಂದರ್ಭ ಲೋಕಾಯುಕ್ತರ ಜೊತೆಗಿದ್ದರು. ಉಡುಪಿಯ ಅತ್ಯಂತ ಪುರಾತನ ಶಾಲೆಯೆನಿಸಿರುವ ಬೋರ್ಡ್ ಹೈಸ್ಕೂಲಿನಲ್ಲಿ ಲೋಕಾಯುಕ್ತರು ವಿದ್ಯಾಭ್ಯಾಸ ಮಾಡಿರುವುದು ಗಮನಾರ್ಹ ಸಂಗತಿ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳು ತಮ್ಮ ಹಳೆಯ ಶಾಲಾ ದಿನಗಳನ್ನು ಅಲ್ಲಿದ್ದವರ ಜೊತೆ ನೆನಪಿಸಿಕೊಂಡರು.
Kshetra Samachara
16/11/2021 03:45 pm