ಮಂಗಳೂರು:ರವಿವಾರ ಮಲ್ಪೆ, ಮಣಿಪಾಲಕ್ಕೆ ಪ್ರವಾಸಕ್ಕೆ ಹೋಗಿದ್ದ ಮೂರು ಯುವಕ, ಮೂರು ಮಂದಿ ಯುವತಿಯರು ವಾಪಸ್ ಬರ್ತಿದ್ದಾಗ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ತಂಡವೊಂದು ಅಡ್ಡಗಟ್ಟಿದೆ. ಅಲ್ಲದೇ ವಾಹನದಲ್ಲಿದ್ದವ್ರ ವಿವರವನ್ನು ಪಡೆದು ಓರ್ವ ಯುವಕನಿಗೆ ಹಲ್ಲೆ ಮಾಡಿದ್ದಾರೆ. ಇದೇ ವೇಳೆ ನಗರದ ನಾರ್ತ್ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ಶರೀಫ್ ಎಂಬುವವರು ತಮ್ಮ ವೈಯಕ್ತಿಕ ಕೆಲಸಕ್ಕೆ ತಮ್ಮ ಕಾರಲ್ಲಿ ಹೋಗುತ್ತಿದ್ದಾಗ ಘಟನೆಯನ್ನು ನೋಡಿ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲದೇ ದೊಡ್ಡ ಅನಾಹುತ ಆಗದಂತೆ ಮುಂಜಾಗ್ರತೆ ವಹಿಸಿದ್ದಾರೆ. ನಂತರ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳ ಕರೆದುಕೊಂಡು ಹೋಗಿದ್ದಾರೆ.
ಈ ಘಟನೆ ಕುರಿತು ವಿದ್ಯಾರ್ಥಿಯೊಬ್ರು ಕಂಪ್ಲೆಂಟ್ ನೀಡಿ ನಮ್ಮ ವಾಹನಗಳನ್ನು ಅಡ್ಡಗಟ್ಟಿ ಅವಾಚ್ಯ ಶಬ್ದದಿಂದ ನಿಂದಿಸಿ ಎಳೆದಾಡಿದ್ದಾರೆ ಎಂದು ಕಂಪ್ಲೆಂಟ್ ಕೊಟ್ಟಿದ್ದಾರೆ. ತಕ್ಷಣ ಪ್ರಕರಣ ದಾಖಲಿಸಿಕೊಂಡು ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
Kshetra Samachara
28/09/2021 03:14 pm