ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭಾನುವಾರದ ಕೊರೋನಾ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ.
ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನ 2.ಗಂಟೆ ವರೆಗೆ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭರ್ಜರಿ ವ್ಯಾಪಾರ ನಡೆದಿದ್ದು ಮಧ್ಯಾಹ್ನದ ಬಳಿಕ ಮೂಲ್ಕಿ ತಾಲೂಕು ಸ್ತಬ್ಧವಾಗಿದೆ.
ಭಾನುವಾರ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೊಗವೀರ ಸಮಾಜ ಬಾಂಧವರಿಂದ ಸಮುದ್ರ ಪೂಜೆ ಇದ್ದ ಕಾರಣ ಬೆಳಿಗ್ಗೆ ಕಾರ್ನಾಡು ಹಾಗೂ ಮುಲ್ಕಿ ಮೀನು ಮಾರುಕಟ್ಟೆ ಯಲ್ಲಿ ಮಹಿಳೆಯರಿಗೆ ರಜೆ ಘೋಷಿಸಲಾಗಿತ್ತು.
ಭಾನುವಾರ ಮಧ್ಯಾಹ್ನದ ಬಳಿಕ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದ್ದು ಮೆಡಿಕಲ್ ಕೂಡ ಮುಚ್ಚಲ್ಪಟ್ಟಿತ್ತು.. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಡೆರಹಿತ ಬಸ್ಸುಗಳು ಹಾಗೂ ಮುಲ್ಕಿ ಕಿನ್ನಿಗೋಳಿ ಕಟೀಲು ರೂಟ್ ನಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿ ಖಾಸಗಿ ಬಸ್ಸುಗಳು ಓಡಾಡಿದ್ದರೂ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು.
ಒಟ್ಟಾರೆಯಾಗಿ ತಾಲೂಕಿನ ಹಳೆಯಂಗಡಿ ,ಪಕ್ಷಿಕೆರೆ ಕಿನ್ನಿಗೋಳಿ, ಅತಿಕಾರಿಬೆಟ್ಟು, ಬಳಕುಂಜೆ ಪ್ರದೇಶದಲ್ಲಿ ಭಾನುವಾರದ ರಜಾ ಹಾಗೂ ಕೊರೊನಾ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ.
ಭಾನುವಾರ ಮುಲ್ಕಿ ತಾಲೂಕಿನ ಅತಿಕಾರಿಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ 1 ,ಪಡುಪಣಂಬೂರು ಗ್ರಾಪಂ ನ ಬೆಳ್ಳಾಯರುನಲ್ಲಿ 1,ಹಳೆಯಂಗಡಿ ಗ್ರಾ.ಪಂ1,ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾಳಿಪಾಡಿಯಲ್ಲಿ 2,ಮೆನ್ನಬೆಟ್ಟು ನಲ್ಲಿ 1ಎಳತ್ತೂರುನಲ್ಲಿ 2, ಐಕಳ ಗ್ರಾ ಪಂ ನ ಎಳಿಂಜೆಯಲ್ಲಿ 1 ಸೇರಿದಂತೆ ಒಟ್ಟು 9 ಕೊರೋನಾ ಪೊಸಿಟಿವ್ ಪ್ರಕರಣ ದಾಖಲಾಗಿದೆ.
Kshetra Samachara
22/08/2021 07:51 pm