ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕನ್ನಡದ ನೆಲದಲ್ಲಿ ಛತ್ರಪತಿ ಶಿವಾಜಿ ಕಾರ್ಯಕ್ರಮಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್: ಶಿವಾಜಿ ಪುತ್ತಳಿ ನಿಲ್ಲುವುದು ಅನುಮಾನವೇ !?

ಉಡುಪಿ: ಕನ್ನಡ ಕನ್ನಡದಲ್ಲಿ ಛತ್ರಪತಿ ಶಿವಾಜಿ ಕಾರ್ಯಕ್ರಮ ಇಂದು ಬಸ್ರೂರು ಕಾಲೇಜು ಮೈದಾನದಲ್ಲಿ ನಡೆಯಲಿದೆ, ಛತ್ರಪತಿ ಶಿವಾಜಿ ಮಹಾರಾಜನ ಪುತ್ಥಳಿ ಅನಾವರಣ ಕಾರ್ಯಕ್ರಮ ಹಾಗೂ ವಿಶ್ವದಾಖಲೆಯ ಬೃಹತ್ ಶಿವಾಜಿಯ ಕೋಲೇಜ್ ಅನಾವರಣ ಕಾರ್ಯಕ್ರಮ ನಡೆಯಲಿದೆ. ಕನ್ನಡದ ನೆಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜನಿಗೆ ಇದೀಗ ಬಸ್ರೂರಿನಲ್ಲಿ ನಿಲ್ಲಲು ಅವಕಾಶ ವಿಲ್ಲವೇ ಎನ್ನುವ ಪ್ರಶ್ನೆ ಕೂಡ ಭುಗಿಲೆದ್ದಿದೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಶಿವಾಜಿಯ ಪುತ್ತಳಿ ನಿಲ್ಲಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ, ಆದರೆ ಅಧಿಕೃತವಾಗಿ ಯುವ ಬ್ರಿಗೇಡ್ ತಂಡಕ್ಕೆ ಪುತ್ತಳಿ ನಿಲ್ಲಲು ಅವಕಾಶ ಇದೆಯಾ ಇಲ್ಲವಾ ಎನ್ನುವುದು ಬೂದಿ ಮುಚ್ಚಿದ ಕೆಂಡದಂತೆ ಗೋಚರಿಸುತ್ತಿದೆ. ಇಂದು ಕುಂದಾಪುರದಿಂದ ಹೊರಡುವ ಬೃಹತ್ ಶೋಭಾಯಾತ್ರೆ ಬೈಕ್ ರ್ಯಾಲಿಯಲ್ಲಿ ಸಾವಿರಾರು ಹಿಂದೂ ಸಂಘಟನೆಯ ಯುವಕರು ಪಾಲ್ಗೊಳ್ಳಲಿದ್ದಾರೆ,

ಯಾವುದೇ ಅಹಿತಕರವಾದ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮುಂಜಾನೆಯಿಂದಲೇ ಬಸ್ರೂರು ಕಾಲೇಜು ಮೈದಾನದಲ್ಲಿ ಬೀಡುಬಿಟ್ಟಿದೆ. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಚಕ್ರವರ್ತಿ ಸೂಲಿಬೆಲೆ ಹಾಗೂ ವಿಶೇಷ ಅತಿಥಿಗಳಾಗಿ ಪೇಜಾವರ ಶ್ರೀಗಳು ಬಿಎಲ್ ಸಂತೋಷ್ ಜಿ ಭಾಗವಹಿಸಲಿದ್ದಾರೆ, ಬಹುನಿರೀಕ್ಷೆಯ ಕನ್ನಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕಾರ್ಯಕ್ರಮಕ್ಕೆ ಇದೀಗ ಕ್ಷಣಗಣನೆ.

Edited By : Manjunath H D
Kshetra Samachara

Kshetra Samachara

21/02/2021 03:04 pm

Cinque Terre

9.38 K

Cinque Terre

0