ಮಂಗಳೂರು: ನಗರದಲ್ಲಿ ಮತ್ತೆ ಐಟಿ ದಾಳಿ ಮುಂದುವರಿದಿದ್ದು, ಉಳ್ಳಾಲ ಶಾಸಕ ಯು.ಟಿ.ಖಾದರ್ ಸಹೋದರ ಇಫ್ತಿಕಾರ್ ಅವರ ಮನೆಗೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿನ ಅಪಾರ್ಟ್ ಮೆಂಟ್ ನಲ್ಲಿನ ಇಫ್ತಿಕಾರ್ ನಿವಾಸಕ್ಕೆ ದಾಳಿ ನಡೆಸಿರುವ ಐಟಿ ಇಲಾಖೆಯು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಐಟಿ ಇಲಾಖೆ ನಿನ್ನೆಯೇ ಇಫ್ತಿಕಾರ್ ಮನೆಗೆ ದಾಳಿ ನಡೆಸಿದ್ದು, ರಾತ್ರಿ ಪೂರ್ತಿ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದೆ. ಅದರ ಮುಂದುವರಿದ ಭಾಗವಾಗಿ ಇಂದು ಕೂಡ ಐಟಿ ಇಲಾಖಾಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ನಿನ್ನೆ ದಾಳಿಗೊಳಗಾದ ನಗರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇಫ್ತಿಕಾರ್ ಪಾಲುದಾರಿಕೆ ಇತ್ತು ಎಂಬ ಸಂಶಯದ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Kshetra Samachara
18/02/2021 03:36 pm