ಮಂಗಳೂರು: 2019ರ ಡಿಸೆಂಬರ್ನಲ್ಲಿ ನಡೆದ ಮಂಗಳೂರು ಗೋಲಿಬಾರ್ಗೆ ಪ್ರತಿಕಾರವಾಗಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಇಬ್ರಾಹಿಂ ಶಾಕೀರ್, ಅಕ್ಬರ್ ಮತ್ತು ಮುಹಮ್ಮದ್ ಹನೀಫ್, ಬಂಧಿತರು. ಈ ಪ್ರಕರಣದಲ್ಲಿ ಈ ಹಿಂದೆ ಮಾಯಾ ಗ್ಯಾಂಗ್ನ 8 ಮಂದಿ ಸದಸ್ಯರನ್ನು ಬಂಧಿಸಲಾಗಿತ್ತು. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
2019ರ ಡಿಸೆಂಬರ್ 19ರಂದು ಸಿಎಎ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಗೋಲಿಬಾರ್ ನಡೆದು ಇಬ್ಬರು ಸಾವನ್ನಪ್ಪಿದ್ದರು. ಘಟನೆಗೆ ಪ್ರತಿಕಾರವಾಗಿ ಘಟನೆಗೆ ಒಂದು ವರ್ಷ ತುಂಬುವ ಸಂದರ್ಭದಲ್ಲಿ ಪೊಲೀಸರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮಾಯಾ ಗ್ಯಾಂಗ್ ಮತ್ತು ಇನ್ನೊಂದು ಗ್ಯಾಂಗ್ ನಿರ್ಧರಿಸಿತ್ತು. ಅದರಂತೆ 2020ರ ಡಿಸೆಂಬರ್ 16ರಂದು ಮಂಗಳೂರಿನ ನ್ಯೂ ಚಿತ್ರಾ ಟಾಕೀಸ್ ಬಳಿಯ ಚೆಕ್ಪೋಸ್ಟ್ನಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಚೂರಿ ಇರಿಯಲಾಗಿತ್ತು. ಮಾಯಾ ಗ್ಯಾಂಗ್ ತಮ್ಮ ಟೀಂನಲ್ಲಿದ್ದ ಅಪ್ರಾಪ್ತನ ಮೂಲಕ ಮತ್ತೇರಿಸುವ ಮಾತ್ರೆಗಳನ್ನು ನೀಡಿ ಹಲ್ಲೆ ನಡೆಸಿತ್ತು. ಆರಂಭದಲ್ಲಿ ಅಪ್ರಾಪ್ತ ಬಾಲಕ ಮತ್ತು ಮತ್ತೋರ್ವನನ್ನು ಬಂಧಿಸಲಾಗಿತ್ತು. ಬಳಿಕ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೆ ಮೂವರನ್ನು ಬಂಧಿಸಲಾಗಿದೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
Kshetra Samachara
29/01/2021 02:55 pm