ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವ್ಯಾಪಾರ ನಿರತ ಮಕ್ಕಳು, ಬಾಲ ಭಿಕ್ಷುಕರ ರಕ್ಷಣೆ

ಉಡುಪಿ: ಪೊಲೀಸ್ ಇಲಾಖೆ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ, ಜಿಲ್ಲಾ ನಾಗರಿಕ ಸೇವಾ ಸಮಿತಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಾಲ ಕಾರ್ಮಿಕರನ್ನು ರಕ್ಷಿಸಿದೆ.

ಸಾಲಿಗ್ರಾಮ ಜಾತ್ರೆಯಲ್ಲಿ ರಾಜಸ್ಥಾನ ಮೂಲದ ಕುಟುಂಬಗಳೊಂದಿಗೆ ಮಕ್ಕಳು ಸಹ ಬೆಲೂನು ವ್ಯಾಪಾರ ಮಾಡುತ್ತಿದ್ದರು. ಇದನ್ನು ಗಮನಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಕ್ಷಣ ತಂಡದೊಂದಿಗೆ ಬಂದು 8 ಮಂದಿ ಹೆಣ್ಣುಮಕ್ಕಳು ಹಾಗೂ 4 ಮಂದಿ ಗಂಡುಮಕ್ಕಳನ್ನು ರಕ್ಷಿಸಿ, ಮಕ್ಕಳನ್ನು ದುಡಿಸದೆ ಶಿಕ್ಷಣ ನೀಡುವಂತೆ ಪೋಷಕರಿಗೆ ಮನವರಿಕೆ ಮಾಡಿಸಿತು.

ಬಳಿಕ ಪೋಷಕರೊಂದಿಗೆ ತಮ್ಮ ಸ್ವಂತ ಊರಿಗೆ ಹೋಗುವಂತೆ ರೈಲ್ವೆ ನಿಲ್ದಾಣಕ್ಕೆ ಕಳುಹಿಸಿ ಕೊಟ್ಟಿತು. ಭಿಕ್ಷಾಟನೆ ನಿರತ ಸುಮಾರು 16 ಮಕ್ಕಳನ್ನು ರಕ್ಷಿಸಿ ಭಿಕ್ಷಾಟನೆ ಮಾಡದಂತೆ ತಡೆದು ಪೋಷಕರೊಂದಿಗೆ ಕಳುಹಿಸಲಾಯಿತು. ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್ , ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ , ಕೋಟ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ. ಪಿ., ಸಹಾಯಕ ಉಪನಿರೀಕ್ಷಕಿ ಮುಕ್ತಾ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅರುಣ್ ಕುಮಾರ್ ರಕ್ಷಣೆ ಕಾರ್ಯದಲ್ಲಿ ಸಾಥ್ ನೀಡಿದರು.

Edited By : Nagesh Gaonkar
Kshetra Samachara

Kshetra Samachara

16/01/2021 09:35 pm

Cinque Terre

19.34 K

Cinque Terre

3

ಸಂಬಂಧಿತ ಸುದ್ದಿ