ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಮಳಲಿ ದರ್ಗಾ ವಿವಾದ: ದೇವಾಲಯವೇ ಎಂಬ ಗೊಂದಲಕ್ಕೆ ವಿಎಚ್‌ಪಿ ಅಷ್ಟಮಂಗಲ ಪ್ರಶ್ನಾಚಿಂತನೆ

ವರದಿ: ವಿಶ್ವನಾಥ ಪಂಜಿಮೊಗರು

ಮಂಗಳೂರು : ಇತ್ತೀಚೆಗೆ ನಗರದ ಹೊರವಲಯದ ಗಂಜಿಮಠದದಲ್ಲಿರುವ ದರ್ಗಾವೊಂದನ್ನು ನವೀಕರಣಕ್ಕಾಗಿ ಕೆಡವಿ ಹಾಕಿದ ಸಂದರ್ಭ ದರ್ಗಾದೊಳಗೆ ಹಿಂದೂ ದೇವಾಲಯದ ಶೈಲಿಯ ಕೆತ್ತನೆಗಳು ಪತ್ತೆಯಾಗಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಇಲ್ಲಿರೋದು ಹಿಂದೂ ದೇವಾಲಯವೇ, ದರ್ಗಾವೇ ಅಥವಾ ಬಸದಿಯೇ ಎಂಬ ಬಗ್ಗೆ ವಿಎಚ್‌ಪಿ ಹಾಗೂ ಬಜರಂಗದಳ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಲು ಚಿಂತನೆ ನಡೆಸಿವೆ.

ಇತ್ತೀಚೆಗೆ ಪತ್ತೆಯಾದ ಮಳಲಿಯ ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ದರ್ಗಾದೊಳಗೆ ನವೀಕರಣ ಕಾಮಗಾರಿ ವೇಳೆ ಹಿಂದೂ ದೇವಾಲಯ ಶೈಲಿಯ ಕೆತ್ತನೆ ಪತ್ತೆಯಾಗಿತ್ತು. ತಕ್ಷಣ ಮಧ್ಯ ಪ್ರವೇಶಿಸಿರುವ ದ.ಕ ಜಿಲ್ಲಾಡಳಿತವು ಮಂಗಳೂರು ತಹಶೀಲ್ದಾರ್‌ರವರ ಮೂಲಕ ದರ್ಗಾ ನವೀಕರಣ ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಿತ್ತು. ಆ ಬಳಿಕ ಕೋರ್ಟ್‌ನಿಂದಲೂ ದರ್ಗಾ ನವೀಕರಣ ಕಾಮಗಾರಿಗೆ ತಡೆಯಾಜ್ಞೆ ಬಂದಿತ್ತು. ಈ‌ ಹಿನ್ನೆಲೆಯಲ್ಲಿ ಈಗಲೂ ದರ್ಗಾದ ಕಾಮಗಾರಿ ಸ್ಥಗಿತಗೊಂಡಿದ್ದು, ದರ್ಗಾ ಇರುವ ಪ್ರದೇಶದ ಮೂಲ ಭೂ ದಾಖಲೆಗಳನ್ನು ಪರಿಶೀಲನೆ ನಡೆಸುವ ಕಾರ್ಯ ನಡೆಯುತ್ತಿದೆ.

ಈ ನಡುವೆ ವಿಎಚ್‌ಪಿ ಹಾಗೂ ಬಜರಂಗದಳ ಈ ವಿಚಾರದಲ್ಲಿ ಪ್ರವೇಶ ಮಾಡಿ, ದರ್ಗಾ ಇರುವ ಜಾಗದಲ್ಲಿ ಈ ಹಿಂದೆ ದೇವಾಲಯವಿತ್ತು ಎಂದು ವಾದಿಸಿತ್ತು. ಅಲ್ಲದೆ ಪುರಾತತ್ವ ಇಲಾಖೆಯ ಮೂಲಕ ಶೋಧ ಕಾರ್ಯ ನಡೆಸಬೇಕೆಂದು ಸರಕಾರಕ್ಕೆ ಒತ್ತಾಯ ಮಾಡಿತ್ತು. ಇದೀಗ ದರ್ಗಾದ ಭೂವಿವರಗಳನ್ನು ತಿಳಿಯಲು ಅಷ್ಟಮಂಗಲ ಪ್ರಶ್ನಾಚಿಂತನೆ ನಡೆಸಲು ವಿಎಚ್‌ಪಿ, ಬಜರಂಗದಳ ನಿರ್ಧಾರ ಕೈಗೊಂಡಿದೆ. ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಮೂಲಕ‌ ಅಲ್ಲಿರೋದು ದರ್ಗಾವೇ ಅಥವಾ ದೇವಾಲಯವೇ ಎಂಬುದಕ್ಕೆ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆಯಿದೆ.

Edited By : Shivu K
PublicNext

PublicNext

16/05/2022 05:06 pm

Cinque Terre

43.11 K

Cinque Terre

7

ಸಂಬಂಧಿತ ಸುದ್ದಿ