ಮಂಗಳೂರು: ಇಲ್ಲಿನ ದೇರೆಬೈಲು ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿಗೆ ಮೀಸಲಿರಿಸಿದ್ದ, ಜಮೀನು ಡಿಸಿ ಮನ್ನಾ ಭೂಮಿಯಾಗಿದೆ. ಆದರೆ ಅರಣ್ಯ ಇಲಾಖೆ ಈ ಸಾವಿರಾರು ಎಕರೆ ಭೂಮಿಯನ್ನು ಆಕ್ರಮಿಸಿದೆ. ತಕ್ಷಣ ಅರಣ್ಯ ಇಲಾಖೆಯಿಂದ ಈ ಭೂಮಿಯನ್ನು ಪರಿಶಿಷ್ಟರಿಗೆ ಬಿಡುಗಡೆ ಮಾಡಬೇಕೆಂದು ಪರಿಶಿಷ್ಟ ಜಾತಿ, ಪಂಗಡದ ಸಮುದಾಯ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎ.ಚಂದ್ರಕುಮಾರ್ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿ, ಈಗಾಗಲೇ ಹಲವಾರು ಕುಟುಂಬಗಳು ಅಲ್ಲಿ ತಲೆಮಾರುಗಳಿಂದ ವಾಸಿಸುತ್ತಿದೆ. ಆದರೆ ಅವರಿಗೆ ಇನ್ನೂ ಹಕ್ಕು ಪತ್ರಗಳು ಇಲ್ಲದಿರುವುದರಿಂದ ಕೆಲವರು ತಮ್ಮ ಜಮೀನಿಗಾಗಿ ಹಕ್ಕುಪತ್ರ ಸಲ್ಲಿಸಿದ್ದಾರೆ. ಅವರಿಗೆ 94ಸಿಯಡಿಯಲ್ಲಿ ಜಮೀನಿಗೆ ಕಂದಾಯ ಇಲಾಖೆ ದರ ನಿಗದಿಪಡಿಸಿದೆ. ಆದ್ದರಿಂದ ತಕ್ಷಣ ಅವರಿಗೆ ಜಮೀನು ಹಕ್ಕು ಪತ್ರ ನೀಡಬೇಕು ಎಂದರು.
ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಪಂಗಡದ ಕುಟುಂಬಗಳಿಗೆ ಸರಕಾರ ಮೀಸಲಿರಿಸಿರುವ ಶೇ.24.10% ನಿಧಿಯಲ್ಲಿ ಮನೆ ನಿರ್ಮಾಣಕ್ಕೆ ಕಾನೂನು ತೊಡಕು ಉಂಟಾಗಿದೆ. ಅದನ್ನು ಸರಳೀಕರಿಸಿ ಸಹಾಯನಿಧಿಯನ್ನು ಹೆಚ್ಚಿಸಬೇಕು. ಮನೆಯ ದುರಸ್ತಿ ನಿಧಿಯನ್ನು ಹೆಚ್ಚಿಸಬೇಕು. ಅಲ್ಲದೆ ಪರಿಶಿಷ್ಟ ಜಾತಿ ಪಂಗಡದ ಬಿ.ಇ., ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡಲಾಗುತ್ತಿದೆ. ಇದನ್ನು ಎಲ್ಲಾ ಪರಿಶಿಷ್ಟ ಜಾತಿ ಪಂಗಡದ ಪದವೀಧರ ವಿದ್ಯಾರ್ಥಿಗಳಿಗೆ ನೀಡಬೇಕೆಂದು ಎ.ಚಂದ್ರಕುಮಾರ್ ಹೇಳಿದರು.
Kshetra Samachara
16/08/2022 06:14 pm