ವರದಿ: ರಹೀಂ ಉಜಿರೆ
ಉಡುಪಿ: ಉಡುಪಿ ರೆಡ್ ಕ್ರಾಸ್ ನ ತಲ್ಲೂರು ಶಿವರಾಮ ಶೆಟ್ಟಿ ಮತ್ತು ಇಬ್ಬರು ಪದಾಧಿಕಾರಿಗಳು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾಗಿ
ಶೋಭಾ ಕುಂದರ್ ( 44 ) ಎಂಬಾಕೆ ಕಣ್ಣೀರಿಟ್ಟಿದ್ದಾರೆ.ಶಿರ್ವ ಗ್ರಾಮದ ಈ ಮಹಿಳೆ ಈ ಹಿಂದೆ ಇಲ್ಲಿ ಕೆಲಸಕ್ಕಿದ್ದು ,ಈಗ ಉದ್ಯೋಗದಿಂದ ತೆಗೆದಿದ್ದಾಗಿ ಆರೋಪ ಮಾಡಿದ್ದಾರೆ.ನ್ಯಾಯಕ್ಕಾಗಿ ಪೊಲೀಸ್ ಠಾಣೆ ,ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಪರಿಶಿಷ್ಟ ಜಾತಿ (ಎಸ್‌ಸಿ) ಗೆ ಸೇರಿದ ಶೋಭಾ ಕುಂದರ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಕಚೇರಿಯಲ್ಲಿ ಕಛೇರಿ ಸೇವಕಿ ಹಾಗೂ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.ಈ ವರ್ಷದ ಮಾರ್ಚ್ ತನಕ ಯಾವುದೇ ಸಮಸ್ಯೆಯೂ ಇರಲಿಲ್ಲ. ಸಂಸ್ಥೆಗೆ ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಕೆ. ಜಯರಾಮ ಆಚಾರ್ಯ ಮತ್ತು ಕೆ.
ಸನ್ಮತ್ ಹೆಗ್ಡೆ ಪ್ರಾರಂಭದಿಂದಲೂ ತಮ್ಮನ್ನು ಹೀಯಾಳಿಸುತ್ತಾ ಕಿರುಕುಳ ಕೊಡುತ್ತಾ ಬಂದಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.ಕಛೇರಿಯ ಎಲ್ಲ ಸಿಬ್ಬಂದಿಗಳ ಸಮಕ್ಷಮ ಈ ಇಬ್ಬರು ತಮಗೆ ಹೊಡೆಯಲು ಬಂದಿದ್ದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾರೆ ಎಂದು ಶೋಭಾ ಆರೋಪಿಸಿದ್ದಾರೆ.
ನನಗೆ ದೌರ್ಜನ್ಯ ಮಾಡಿದ ದೃಶ್ಯ ಸಿ.ಸಿ.ಟಿವಿಯಲ್ಲೂ ಸೆರೆಯಾಗಿದೆ.
ಈ ಘಟನೆ ನಡೆದ ಬಳಿಕವೂ ಕಛೇರಿಯಿಂದ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಶೋಭಾ , ಕೆ. ಜಯರಾಮ ಆಚಾರ್ಯರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿ ಕೇಸು ದಾಖಲಿಸಿದ್ದಾರೆ.ಅಲ್ಲೂ ನ್ಯಾಯ ಸಿಗಲಿಲ್ಲ.ಇದೀಗ ಅವರು ನ್ಯಾಯವಾದಿ ಉದಯಕುಮಾರ್ ಮೂಲಕ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ.ಉದಯಕುಮಾರ್ ದೌರ್ಜನ್ಯಕ್ಕೊಳಗಾದ ಮಹಿಳೆಗೆ ನ್ಯಾಯ ಕೊಡಿಸಿಯೇ ತೀರುತ್ತೇನೆ ಎಂದಿದ್ದಾರೆ.
ನನ್ನನ್ನು ಉದ್ಯೋಗದಿಂದ ತೆಗೆದುಹಾಕಿದ್ದಾರೆ.ನಾನು ಬಡ ಕುಟುಂಬದವಳು.ಜಿಲ್ಲಾಧಿಕಾರಿಗಳ ಗಮನಕ್ಕೂ ಈ ವಿಷಯ ತಂದಿದ್ದೇನೆ.ಅಲ್ಲೂ ನ್ಯಾಯ ಸಿಕ್ಕಿಲ್ಲ.ನನಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಪಬ್ಲಿಕ್ ನೆಕ್ಸ್ಟ್ ಮೂಲಕ ಆಗ್ರಹಿಸಿದ್ದಾರೆ.
Kshetra Samachara
07/08/2021 06:06 pm