ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊರಗರ ಆರೋಗ್ಯನಿಧಿ ಯೋಜನೆ ಹಿಂಪಡೆದಿದ್ದು ಆರೆಸ್ಸೆಸ್‌ನ ಹಿಡನ್ ಅಜೆಂಡಾ

ಉಡುಪಿ: ಕೊರಗ ಸಮುದಾಯಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಅದರ ಸಂಪೂರ್ಣ ವೆಚ್ಚವನ್ನು I.T.D.P ಮೂಲಕ ಭರಿಸುವ ವ್ಯವಸ್ಥೆಯನ್ನು ಹಿಂಪಡೆದಿದ್ದು ಬಿಜೆಪಿ ಮತ್ತು ಅರೆಸ್ಸೆಸ್ ನ ಹಿಡನ್ ಅಜೆಂಡಾ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಸರಕಾರ ಕೊರಗರಿಗೆ ಆರೋಗ್ಯನಿಧಿ ಯೋಜನೆ ಮೂಲಕ ಖಾಸಗಿ ಆಸ್ಪತ್ರೆಗಳಲ್ಲೂ ಉತ್ತಮ ಚಿಕಿತ್ಸೆ ಪಡೆಯಲು ಅವಕಾಶ ಮಾಡಿತ್ತು. ಆದರೆ ಬಿಜೆಪಿ ನೇತೃತ್ವದ ಸರಕಾರ ಈ ಯೋಜನೆಯನ್ನು ರದ್ದುಗೊಳಿಸಿದೆ. ಇದು ಕೊರಗರಿಗೆ ಮಾಡಿದ ದ್ರೋಹ ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತರಿಗೆ ಒಂದಲ್ಲೊಂದು ರೀತಿಯಲ್ಲಿ ತೊಂದರೆ ಕೊಡುತ್ತಿರುವ ಬಿಜೆಪಿ ಈಗ ಕೊರಗರು ಮತ್ತು ಎಸ್ಸಿ ಎಸ್ಟಿಗಳ ಒಂದೊಂದೇ ಯೋಜನೆಯನ್ನು ವಾಪಾಸು ಪಡೆಯುತ್ತಿದೆ.ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ತಕ್ಷಣ ಈ ಯೋಜನೆಯನ್ನು ಈ ಹಿಂದಿನಂತೆ ಮುಂದುವರೆಸಬೇಕು ಎಂದು ಕಾಂಗ್ರೆಸ್ ಮುಖಂಡರು ಪಬ್ಲಿಕ್‌ ನೆಕ್ಸ್ಟ್ ಮೂಲಕ ಆಗ್ರಹಿಸಿದ್ದಾರೆ.

Edited By : Somashekar
Kshetra Samachara

Kshetra Samachara

08/09/2022 01:30 pm

Cinque Terre

7.17 K

Cinque Terre

2

ಸಂಬಂಧಿತ ಸುದ್ದಿ