ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಮಣಿಪಾಲದಲ್ಲಿ ಬೀದಿ ನಾಯಿಗಳ ಕಾಟ: ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ!

ಉಡುಪಿ: ಉಡುಪಿ ಹಾಗೂ ಮಣಿಪಾಲದಲ್ಲಿ ಬೀದಿ ನಾಯಿಗಳ ಉಪಟಳ ವಿಪರೀತವಾಗಿದ್ದು, ಸಾರ್ವಜನಿಕರು ಈ ಬಗ್ಗೆ ನಗರ ಸಭೆಗೆ ಪದೇ ಪದೇ ದೂರು ನೀಡಿದರೂ, ನಗರಸಭೆ ನೆಪ ಹೇಳುತ್ತಾ ಮೌನಕ್ಕೆ ಶರಣಾಗಿದೆ. ಉಡುಪಿಯ ಅಜ್ಜರಕಾಡು, ಮಿಷನ್ ಕಾಂಪೌಂಡ್, ಬನ್ನಂಜೆ, ಸಿಟಿ ಬಸ್ ನಿಲ್ದಾಣ, ಹಾಗೂ ಮಣಿಪಾಲ ಸಿಟಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ರಾತ್ರಿ ವೇಳೆ ಕೆಲಸ ಬಿಟ್ಟು ಮನೆಗೆ ನಡೆದುಕೊಂಡು ಬರುವವರನ್ನು ಬೀದಿ ನಾಯಿಗಳ ಗುಂಪು ಅಟ್ಟಾಡಿಸಿಕೊಂಡು ಬರುತ್ತಿದ್ದು, ರಾತ್ರಿ ನಡೆದುಕೊಂಡು ಬರುವುದಕ್ಕೂ ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.

ಇತ್ತೀಚೆಗೆ ಮಣಿಪಾಲದಲ್ಲಿ ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯನ್ನು ಬೀದಿ ನಾಯಿಗಳು ಕಚ್ಚಿ ಗಂಭೀರ ಗಾಯಗೊಳಿಸಿತ್ತು. ಅಲ್ಲದೇ ಹಲವಾರು ನಿರಾಶ್ರಿತರು ಮತ್ತು ಹಿರಿಯರನ್ನು ಬೀದಿ ನಾಯಿಗಳು ಕಡಿದು ಗಾಯಗೊಳಿಸಿವೆ. ಪ್ರತಿ ವರ್ಷ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲಾಗುತ್ತಿದ್ದರೂ, ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಸಾರ್ವಜನಿಕರಿಗೆ ಸಂತಾನಹರಣ ಚಿಕಿತ್ಸೆ ಮೇಲೆಯೇ ಅನುಮಾನ ಮೂಡುವಂತಾಗಿದೆ. ಬೀದಿ ನಾಯಿಗಳ ಉಪಟಳದ ಬಗ್ಗೆ ನಗರಸಭೆಯಲ್ಲಿ ವಿಷಯ ಪ್ರಸ್ತಾಪ ಆದರೂ, ಸಮರ್ಪಕ ಉತ್ತರ ಸಿಗುತ್ತಿಲ್ಲ. ಹೀಗಾಗಿ ಆದಷ್ಟು ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.

Edited By : Somashekar
Kshetra Samachara

Kshetra Samachara

06/09/2022 03:53 pm

Cinque Terre

23.82 K

Cinque Terre

1

ಸಂಬಂಧಿತ ಸುದ್ದಿ