ಸುಳ್ಯ: ಬೆಳ್ಳಾರೆ ಠಾಣೆಯ ನೂತನ ಎಸ್ಐ ಆಗಿ ಸುಹಾಸ್ ಆರ್. ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ಸುಹಾಸ್ ಆರ್. ಅವರನ್ನು ಬೆಳ್ಳಾರೆ ಎಸ್‌ಐ ಆಗಿ ವರ್ಗಾವಣೆ ಮಾಡಲಾಗಿತ್ತು.
ವಾರದ ಅವಧಿಯಲ್ಲಿ ಕಳಂಜದ ಮಸೂದ್ ಕೊಲೆ ಪ್ರಕರಣ ಹಾಗು ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ನಡೆದು ಬೆಳ್ಳಾರೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು.
ಇದರ ಬೆನ್ನಲ್ಲೇ ಬೆಳ್ಳಾರೆ ಠಾಣೆಯ ಉಪ ನಿರೀಕ್ಷಕರಾಗಿದ್ದ ರುಕ್ಕ ನಾಯ್ಕ, ಸುಬ್ರಹ್ಮಣ್ಯ ಎಸ್‌ಐ ಜಂಬೂರಾಜ್ ಮಹಾಜನ್, ಬೆಳ್ಳಾರೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಬಾಲಕೃಷ್ಣ ಅವರನ್ನು ವರ್ಗಾವಣೆ ಮಾಡಲಾಗಿತ್ತು.
ವಿಟ್ಲ ಠಾಣೆಯ ಎಸ್‌ಐ ಮಂಜುನಾಥ್ ಟಿ ಅವರನ್ನು ಸುಬ್ರಹ್ಮಣ್ಯ ಎಸ್‌ಐ ಆಗಿ ವರ್ಗಾವಣೆ ಮಾಡಲಾಗಿದೆ. ರುಕ್ಕ ನಾಯ್ಕ, ಜಂಬೂರಾಜ್ ಮಹಾಜನ್ ಅವರಿಗೆ ನಿರ್ದಿಷ್ಟ ಠಾಣೆ ತೋರಿಸಿಲ್ಲ.
PublicNext
01/08/2022 08:11 am