ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಭಾರತ್ ಬಂದ್ ಹಿನ್ನೆಲೆ; ಮೋದಿ, ಅದಾನಿ, ಅಂಬಾನಿ ಪ್ರತಿಕೃತಿ ದಹನ

ಉಡುಪಿ: ಕೇಂದ್ರ ಸರಕಾರದ ರೈತ ವಿರೋಧಿ ಮಸೂದೆಗಳ ವಿರುದ್ಧ ದೇಶಾದ್ಯಂತ ನಡೆದ ಬಂದ್ ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ, ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು.

ಸಿಐಟಿಯು, ಸಿಪಿಐಎಂ, ಕಿಸಾನ್ ಕಾಂಗ್ರೆಸ್, ಸಹಬಾಳ್ವೆ ಉಡುಪಿ, ಕರ್ನಾಟಕ ಪ್ರಾಂತ ರೈತ ಸಂಘ, ಜಿಲ್ಲಾ ಮುಸ್ಲಿಂ ಒಕ್ಕೂಟ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಜಂಟಿ ಆಶ್ರಯದಲ್ಲಿ ನಡೆದ ಪ್ರತಿಭಟನೆ ಸಭೆಯಲ್ಲಿ ಪ್ರಧಾನಿ ಮೋದಿ, ಅಂಬಾನಿ, ಆದಾನಿಯವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು ಹುತಾತ್ಮ ಸೈನಿಕರ ಸ್ಮಾರಕದೆದುರು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಮಾತನಾಡಿದ ಸಿಐಟಿಯು ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನವೆಂಬರ್ 26 ರಂದು ಬಿಎಂಎಸ್ ಹೊರತುಪಡಿಸಿ 10ಕ್ಕೂ ಅಧಿಕ ಕಾರ್ಮಿಕ ಸಂಘಟನೆ ಮತ್ತು 60 ಕ್ಕೂ ಹೆಚ್ಚು ಸ್ವತಂತ್ರ ಸಂಘಟನೆಗಳು ರೈತರ ದೆಹಲಿ ಚಲೋಗೆ ಬೆಂಬಲ ಸೂಚಿಸಿದವು.

ಈ ದೇಶದಲ್ಲಿ ಸಂಪತ್ತನ್ನು ಸೃಷ್ಟಿ ಮಾಡುವ ರೈತರು, ಕಾರ್ಮಿಕರು ಒಂದಾಗಿ ಪ್ರತಿಭಟನೆ ಮಾಡುವ ಒಂದು ಚರಿತ್ರಾರ್ಹ ಸನ್ನಿವೇಶ ಇದು. ರೈತರು ಹೋರಾಟದ ಸಂದರ್ಭ ಇಟ್ಟ ಬೇಡಿಕೆಗಳು ಎರಡೇ. ಮೊದಲನೆಯದು ಈಗಾಗಲೇ ಪಾಸ್ ಮಾಡಿರುವ 3 ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು ಮತ್ತು ವಿದ್ಯುಚ್ಛಕ್ತಿ ಕಾಯಿದೆಯನ್ನು ಹಿಂಪಡೆಯಬೇಕು ಎಂಬುದು. ರೈತರು ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ, ಕರ್ನಾಟಕ ,ಮಧ್ಯಪ್ರದೇಶದಿಂದ ಇಲ್ಲಿಗೆ ಆಗಮಿಸಿದ್ದರು. ಆದರೆ, ದೆಹಲಿಯಲ್ಲಿ ಅವರನ್ನು ಜಲಫಿರಂಗಿ, ಅಶ್ರುವಾಯು ಬಳಸಿ ತಡೆಗಟ್ಟುವ ಪ್ರಯತ್ನವನ್ನು ಸರಕಾರ ಮಾಡಿತು. ಈ ಬಿಜೆಪಿ ಸರಕಾರ ಯಾವ ರೀತಿಯಲ್ಲಿ ರೈತ ವಿರೋಧಿ ಎಂಬುದನ್ನು ಗಮನಿಸಬೇಕಾಗಿದೆ. ಚೈನಾದಿಂದ ನಮಗೆ ತೊಂದರೆ ಇದೆ ಎಂದು ಸರಕಾರ ಹೇಳುತ್ತಿದೆ. ಆದರೆ ಗಡಿಯನ್ನು ಕಾಯಲು ಇರುವ ಬಿಎಸ್ ಎಫ್ ಪಡೆಯನ್ನು ಈ ಸರಕಾರ ರೈತರು ದೆಹಲಿ ಪ್ರವೇಶಿಸುವುದನ್ನು ತಡೆಯಲು ಬಳಸಿತು ಎಂದರು.

Edited By : Nagesh Gaonkar
Kshetra Samachara

Kshetra Samachara

08/12/2020 09:12 pm

Cinque Terre

10.15 K

Cinque Terre

3

ಸಂಬಂಧಿತ ಸುದ್ದಿ