ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವೀರಭಥಿರಾ ಕಂಪನಿಯಿಂದ ವಂಚಿತರಾದವರಿಗೆ ಪಬ್ಲಿಕ್ ನೆಕ್ಸ್ಟ್ ವರದಿಯ ಮೂಲಕ 24 ಗಂಟೆ ಒಳಗೆ ಹಣ ವಾಪಸ್ !

ಉಡುಪಿ: ಆನ್ಲೈನ್ ಬಿಸಿನೆಸ್ ಮೂಲಕ ಹೆಚ್ಚು ಹೆಚ್ಚು ಹಣ ಸಂಪಾದನೆ ಮಾಡಬಹುದು ಎಂದು ಒಂದಿಷ್ಟು ಮುಗ್ಧರನ್ನು ದಾರಿತಪ್ಪಿಸಿ ಆನ್ಲೈನಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರಚೋದಿಸುವ ತಂಡ ರಾಜ್ಯದಲ್ಲಿ ತುಂಬಾನೆ ಇದೆ. ಇಂತಹ ಆನ್ಲೈನ್ ಕಂಪನಿಗಳು ಆರ್ಬಿಐ ಮಾನ್ಯತೆಯನ್ನು ಪಡೆದಿದೆ ಇಲ್ಲವಾ ಅನ್ನೋದನ್ನ ಗ್ರಾಹಕರು ಮೊದಲು ತಿಳಿದುಕೊಳ್ಳಬೇಕಾಗುತ್ತದೆ.

ಹಾಗೆಯೇ ನಿನ್ನೆ ಪಬ್ಲಿಕ್ ನೆಕ್ಸ್ಟ್ ನಲ್ಲಿ ಇಂಥದ್ದೆ ಒಂದು ವರದಿಯನ್ನು ಪ್ರಸಾರ ಮಾಡಲಾಗಿತ್ತು ತಮಿಳುನಾಡು ಮೂಲದ ವೀರಭಥಿರಾ ಎನ್ನುವ ಒಂದು ಕಂಪನಿಗೆ ಉಡುಪಿ ಜಿಲ್ಲೆಯಿಂದ ಸಾಕಷ್ಟು ಜನ ಹಣಹೂಡಿಕೆ ಮಾಡಿದ್ರು, ಇದರಲ್ಲಿ ತಾವು ಹಾಕಿದ ಹಣ ವಾಪಸ್ ಸಿಗದೇ ಕಂಗಾಲಾಗಿದ್ದ ಒಂದಿಷ್ಟು ಜನ ಪಬ್ಲಿಕ್ ನೆಕ್ಸ್ಟ್ ಮೊರೆ ಬಂದು ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ, ಇದನ್ನು ಮನಗಂಡ ನಾವು ವಿಸ್ತೃತ ವಾದ ವರದಿಯನ್ನು ಪ್ರಸಾರ ಮಾಡಿದ್ವಿ, ಈ ಬಗ್ಗೆ ನಮ್ಮ ವರದಿಗಾರ ಸಂದೇಶ ಶೆಟ್ಟಿ ಆಜ್ರಿ ಮೋಸ ಹೋದ ಗ್ರಾಹಕರನ್ನು ಮಾತನಾಡಿಸಿದ್ದಾರೆ ಏನ್ ಹೇಳ್ತಾರೆ ನೀವೇ ನೋಡಿ.

Edited By : Nagesh Gaonkar
Kshetra Samachara

Kshetra Samachara

23/11/2020 06:20 pm

Cinque Terre

28.28 K

Cinque Terre

5