ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೂರ್ತಿ ರಚನೆಕಾರರ ಪೈಕಿ ಶೇಖರ್ ಕಲ್ಮಾಡಿ ಜಿಲ್ಲೆಗೇ ಟಾಪ್: ಇವರ ಮಣ್ಣಿನ ಗಣಪನಿಗೆ ಸಖತ್ ಡಿಮ್ಯಾಂಡ್!

ಉಡುಪಿ: ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಗಣೇಶನ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಗಣೇಶ ಹಬ್ಬಕ್ಕೆ ಇನ್ನು ನಾಲ್ಕೇ ದಿನ ಬಾಕಿ. ಈಗಾಗಲೇ ಮೂರ್ತಿ ತಯಾರಕರ ಮನೆಗಳಲ್ಲಿ ವಿವಿಧ ಶೈಲಿಯ ಮೂರ್ತಿಗಳ ತಯಾರಿಕೆ ಭರದಿಂದ ಸಾಗಿದೆ. ಉಡುಪಿಯ ಅಲೆವೂರಿನ ನಿವೃತ್ತ ಶಿಕ್ಷಕರೊಬ್ಬರು ಈ ಸಾಂಪ್ರದಾಯಿಕ ಮೂರ್ತಿ ರಚನೆ ಮಾಡುವವರ ಪೈಕಿ ಉಡುಪಿಗೇ ಟಾಪ್ ಎನಿಸಿಕೊಂಡಿದ್ದಾರೆ.

ಇವರು ,ನಿವೃತ್ತ ಶಿಕ್ಷಕ ಕಲ್ಮಾಡಿ ಶೇಖರ್ ಪೂಜಾರಿ. ಸ್ಥಳೀಯ ನೆಹರೂ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಪಡೆದಿದ್ದಾರೆ. ಶಿಕ್ಷಕರಾಗಿದ್ದಾಗ ಮತ್ತು ನಿವೃತ್ತ ಜೀವನದಲ್ಲಿ ಇವರು ಮಾಡಿದ ಪರಿಸರ ಸ್ನೇಹಿ ,ಮಣ್ಣಿನ ಗಣಪನಿಗೆ ಎಲ್ಲಿಲ್ಲದ ಡಿಮ್ಯಾಂಡ್ ಇದೆ. ತುಂಬ ಚಾಕಚಕ್ಯತೆಯಿಂದ, ಭಯ ಭಕ್ತಿಯಿಂದ ಇವರು ವರ್ಷಂಪ್ರತಿ ಹಲವು ಮೂರ್ತಿಗಳನ್ನು‌ ಮಾಡಿ ಕೊಡುತ್ತಾರೆ. ದೂರದ ಕುಂದಾಪುರದಿಂದ ಜೇಡಿ ಮಣ್ಣು ತಂದು, ಅದನ್ನು ಹದ ಮಾಡಿ ತುಂಬ ಶ್ರದ್ಧೆಯಿಂದ ಮೂರ್ತಿಗೆ ರೂಪ ಕೊಡುತ್ತಾರೆ. ನಂತರ ಅದಕ್ಕೆ ಆಕರ್ಷಕ ಬಣ್ಣ ಬಳಿಯಲಾಗುತ್ತದೆ.

ಅಲೆವೂರು ಸಮೀಪ ಮನೆಯಲ್ಲೇ ಮೂರ್ತಿ ರಚಿಸುವ ಕಲ್ಮಾಡಿ ಶೇಖರ್ ಪೂಜಾರಿಯವರ ಕೈಯಲ್ಲಿ ವಿಗ್ರಹ ರಚಿಸುವುದು ಉಡುಪಿ ಜನರ ಕನಸು.ಈ ಬಾರಿ ಸಾಕಷ್ಟು ಆರ್ಡರ್ ಬಂದಿವೆ. ಸಾರ್ವಜನಿಕ ಮತ್ತು‌ ಮನೆಗಳಲ್ಲಿ ಪ್ರತಿಷ್ಠಾಪಿಸುವ ಹಲವು ಗಣಪಗಳು ಇದೀಗ ತಯಾರಾಗಿವೆ.ಇವರಿಗೆ ನಾಲ್ಕೈದು ಮಂದಿ ಶಿಷ್ಯರು ಸಾಥ್ ನೀಡುತ್ತಾರೆ.

ಈಗ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನ ಝಮಾನಾ .ಆದರೂ ಅದಕ್ಕೆ ಪ್ರಬಲ ಪೈಪೋಟಿ ನೀಡುವ ತಾಕತ್ತು ಪರಿಸರಸ್ನೇಹಿ ಮಣ್ಣಿನ ಗಣಪನಿಗಿದೆ. ಆದರೆ ಮಣ್ಣಿನ ಗಣಪ ತಯಾರಿಗೆ ಬೇಕಾಗುವ ಜೇಡಿ ಮಣ್ಣಿನ ಕೊರತೆ, ಮೂರ್ತಿ ರಚನೆಕಾರರನ್ನು ಕಾಡುತ್ತಿದೆ. ಜೇಡಿ ಮಣ್ಣೂ ದುಬಾರಿಯಾಗಿದೆ ಅಂತಾರೆ ಅವರು. ಒಟ್ಟಾರೆ ಆಧುನಿಕತೆ ಭರಾಟೆ ಮಧ್ಯೆ ಮಣ್ಣಿನ ಗಣಪನಿಗೆ ಈಗಲೂ ಬೇಡಿಕೆ ಹೆಚ್ಚುತ್ತಿರುವುದು ಖುಷಿಯ ಸಂಗತಿ.

ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ

Edited By : Somashekar
Kshetra Samachara

Kshetra Samachara

26/08/2022 04:47 pm

Cinque Terre

5.86 K

Cinque Terre

3

ಸಂಬಂಧಿತ ಸುದ್ದಿ