ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೇರಿಕಾದಲ್ಲಿ ಕುಂದಾಪುರದ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಕಲಾಕೃತಿ ಪ್ರದರ್ಶನ

ಕುಂದಾಪುರ: ಅಮೆರಿಕದ ಎನ್‌ಎಫ್‌ಟಿ ಡಾಟ್ ಎನ್‌ವೈಸಿ ಸಂಸ್ಥೆಯು ನ್ಯೂಯಾರ್ಕ್ ಸಿಟಿಯ ಪ್ರತಿಷ್ಠಿತ ಟೈಮ್ಸ್ ಸ್ಟೇರ್‌ನಲ್ಲಿ ಎನ್‌ಎಫ್‌ಟಿ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದ್ದು ಅದರಲ್ಲಿ ಕುಂದಾಪುರದ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರ ಕಲಾಕೃತಿ ಪ್ರದರ್ಶನಗೊಂಡಿದೆ.

ಜೂ.20ರಿಂದ 23ರ ತನಕ ಈ ಪ್ರದರ್ಶನ ಏರ್ಪಡಿಸಲಾಗಿತ್ತು.ಇದಕ್ಕೆ ವಿಶ್ವದ ಸಾವಿರಾರು ಕಲಾವಿದರು ಕಲಾಕೃತಿಗಳನ್ನು ಕಳುಹಿಸಿದ್ದರು. ಈ ಪೈಕಿ ಆಯ್ದ 200ರಷ್ಟು ಕೃತಿಗಳು ಟೈಮ್ಸ್ ಸ್ಟೇರ್‌ನ ಬಿಲ್‌ಬೋರ್ಡ್‌ನಲ್ಲಿ ಪ್ರದರ್ಶನಗೊಂಡಿದ್ದು, ಅದರಲ್ಲಿ ಕುಂದಾಪುರದ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್‌ ಆಚಾರ್ಯ ಅವರ 'ಐ ಕೇರ್' ಹೆಸರಿನ ಎನ್‌ಎಫ್‌ಟಿ ಕಲಾಕೃತಿಯೂ ಸೇರಿದೆ.

ಸತೀಶ್ ಆಚಾರ್ಯ ಭಾರತದ ಹೆಸರಾಂತ ವ್ಯಂಗ್ಯಚಿತ್ರಕಾರರ ಸಾಲಿಗೆ ಸೇರಿದವರು. ವೃತ್ತಿಪರ ವ್ಯಂಗ್ಯಚಿತ್ರಕಾರರಾಗಿ ಗುರುತಿಸಿಕೊಂಡು ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

24/06/2022 01:19 pm

Cinque Terre

6.38 K

Cinque Terre

0