ಸುಳ್ಯ: ಯುದ್ಧಪೀಡಿತ ಉಕ್ರೇನ್ ನಲ್ಲಿ ಎಂ.ಬಿ.ಬಿ.ಎಸ್. ವಿದ್ಯಾರ್ಥಿನಿ ಸುಳ್ಯದ ಐವರ್ನಾಡಿನ ಸಾಕ್ಷಿ ಸುಧಾಕರ್ ಸುರಕ್ಷಿತವಾಗಿದ್ದು, ಸ್ವದೇಶಕ್ಕೆ ಮರಳಲು ಕಾಯುತ್ತಿದ್ದಾರೆ.
ಸುಳ್ಯ ತಾಲೂಕಿನ ಐವರ್ನಾಡಿನ ಸುಧಾಕರ ಅವರ ಪುತ್ರಿ ಸಾಕ್ಷಿ, ಉಕ್ರೇನ್ ನ ಯುನಿವರ್ಸಿಟಿಯಲ್ಲಿ 4ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, ಯುದ್ಧ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಬರಲು ಕಾತರದಿಂದ ಇದ್ದಾರೆ. ಸಾಕ್ಷಿ ಸಹಿತ 300 ವಿದ್ಯಾರ್ಥಿಗಳು ಬಸ್ ನಲ್ಲಿ ಮಿಕೈರಾವ್ ತಲುಪಿದ್ದು, ಅಲ್ಲಿಂದ ವಿಮಾನದ ಮೂಲಕ ಭಾರತ ತಲುಪಲಿದ್ದಾರೆ.
ಸಾಕ್ಷಿ, ಉಕ್ರೇನ್ ನಲ್ಲಿ ತಾನು ತಂಗಿರುವ ಬಂಕರ್ ಇರುವ ಪ್ರದೇಶದ ಸಮಸ್ಯೆ, ಸ್ಥಿತಿಗತಿ, ಸಂಕಷ್ಟ ಕುರಿತು ವಿವರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆರವಿಗೆ ಮೊರೆ ಇಟ್ಟಿದ್ದಾರೆ.
Kshetra Samachara
04/03/2022 11:18 am