ಉಡುಪಿ: ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದ್ದ ಇಂದ್ರಾಳಿ ಸೇತುವೆ ರಸ್ತೆ (ರಾ. ಹೆ. 169ಎ) ಕಾಮಗಾರಿಗೆ ಅ.1ರಿಂದ ಪ್ರಾರಂಭಗೊಳ್ಳಲಿದೆ. ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ತಯಾರಿ ನಡೆಸಲಾಗಿದ್ದು, ಈ ಮಾರ್ಗದಲ್ಲಿ ಘನ ವಾಹನ ಸಂಚಾರಕ್ಕೆ ನಿಷೇಧ ಹೊರಡಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಅ.1ರಿಂದ 45 ದಿನಗಳವರೆಗೆ ಕಾರು, ದ್ವಿಚಕ್ರ ವಾಹನ, ಬಸ್ಸು ಹೊರತುಪಡಿಸಿ ಇತರೆ ಘನ ವಾಹನಗಳಿಗೆ (ಮಲ್ಟಿ ಎಕ್ಸೆಲ್ ಮಾದರಿಯ ವಾಹನಗಳು) ಈ ರಸ್ತೆಯಲ್ಲಿ ಪ್ರವೇಶವಿಲ್ಲ .
ಘನ ವಾಹನಗಳ ಬದಲಿ ಮಾರ್ಗ ಇಂತಿದೆ:
ಕುಂದಾಪುರ ಕಡೆಯಿಂದ- ಅಂಬಾಗಿಲು, ಪೆರಂಪಳ್ಳಿ, ಮಣಿಪಾಲ ರಸ್ತೆ. ಉಡುಪಿಯಿಂದ ಕಲ್ಸಂಕ-ಗುಂಡಿಬೈಲು, ಎ. ವಿ. ಬಾಳಿಗ ಆಸ್ಪತ್ರೆ ಮೂಲಕ ಮಣಿಪಾಲಕ್ಕೆ, ಕಾರ್ಕಳ, ಹಿರಿಯಡ್ಕದಿಂದ ಮಣಿಪಾಲ, ಪೆರಂಪಳ್ಳಿ, ಅಂಬಾಗಿಲು ಮೂಲಕ ಚಲಿಸಬೇಕು.
ಉಡುಪಿ-ಮಣಿಪಾಲ ಸಂಚರಿಸುವ ದ್ವಿಚಕ್ರ ವಾಹನ, ಕಾರು, ಬಸ್ಸು ಇಂದ್ರಾಳಿ ಸೇತುವೆ ಮೇಲೆ ಏಕಮುಖ ನಿರ್ಬಂಧಿತ ರೀತಿಯಲ್ಲಿ ಚಲಿಸುವಂತೆ ಡಿಸಿ ಪ್ರಕಟನೆ ತಿಳಿಸಿದೆ.
ಕಾರ್ಕಳ, ಹಿರಿಯಡ್ಕದಿಂದ ಬರುವ ಘನ ವಾಹನಗಳು ಮಣಿಪಾಲ- ಪೆರಂಪಳ್ಳಿ- ಅಂಬಾಗಿಲು ರಸ್ತೆ ಮೂಲಕ ಚಲಿಸಬೇಕು.
ಉಡುಪಿಯಿಂದ ಮಣಿಪಾಲಕ್ಕೆ ತೆರಳುವ ದ್ವಿಚಕ್ರ ವಾಹನ, ಕಾರುಗಳು ಮತ್ತು ಬಸ್ಸುಗಳು ಹಾಲಿ ಇಂದ್ರಾಳಿ ಸೇತುವೆ ಮೇಲೆ ಏಕಮುಖ ನಿರ್ಬಂಧಿತ ರೀತಿಯಲ್ಲಿ ಚಲಿಸಬೇಕು ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Kshetra Samachara
30/09/2022 04:13 pm