ಉಡುಪಿ: ಉಡುಪಿಯ ಬಡಗುಬೆಟ್ಟು ಗ್ರಾಮದ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಉಡುಪಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ ಎಚ್. ತಾವೇ ಸ್ವತಃ ತಾಜ್ಯ ನಿರ್ವಹಣೆ ವಾಹನ ಚಲಾಯಿಸಿ ನಾಗರಿಕರಿಂದ ಕಸ ಸಂಗ್ರಹಿಸಿದರು.
ಇಂದು ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಡಗಬೆಟ್ಟು ಗ್ರಾಮ ಪಂಚಾಯತ್‌ನ ತ್ಯಾಜ್ಯ ನಿರ್ವಹಣಾ ವಾಹನವನ್ನು ಚಾಲನೆ ಮಾಡಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಣೆಯಲ್ಲಿ ಭಾಗಿಯಾಗಿ ಎಲ್ಲರ ಅಚ್ಚರಿಗೆ ಕಾರಣರಾದರು, ಐಎಎಸ್ ಅಧಿಕಾರಿಯೊಬ್ಬರ ಈ ನಡೆ ಜಿಲ್ಲೆಯ ತ್ಯಾಜ್ಯ ನಿರ್ವಹಣಾ ಕಾರ್ಯಕರ್ತರಿಗೆ ಸ್ಫೂರ್ತಿ ತಂದಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಜಿಪಂ ಮುಖ್ಯ ಯೋಜನಾಧಿಕಾರಿಗಳು, ಇತರ ಪ್ರಮುಖರು ಪ್ರಸನ್ನ ಎಚ್ ಜೊತೆಗಿದ್ದರು.
Kshetra Samachara
24/09/2022 06:15 pm