ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಸಾವಿಗೆ ಆಹ್ವಾನ ನೀಡುತ್ತಿದ್ದ ರಸ್ತೆಗುಂಡಿ ಮುಚ್ಚಿಸಿದ ಪೊಲೀಸ್ ಅಧಿಕಾರಿ

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯೇ ಸರ್ವೀಸ್ ರಸ್ತೆಯಲ್ಲಿ ಕೃತಕ ತೆರೆದ ಬಾವಿ ಅಪಾಯಕ್ಕೆ ಕಾರಣವಾಗುತ್ತಿರುವ ಕುರಿತು ಸೋಮವಾರ ಪಬ್ಲಿಕ್ ನೆಕ್ಸ್ಟ್ ವರದಿಮಾಡಿ ಗಮನಸೆಳೆದಿತ್ತು.

ವರದಿ ನೋಡಿ ಎಚ್ಚೆತ್ತ ಬ್ರಹ್ಮಾವರ ಪೋಲಿಸ್ ಸರ್ಕಲ್ ಇನ್ಸಸ್ಪೆಕ್ಟರ ಕಛೇರಿಯ ಸಿಬ್ಬಂದಿಯಾದ ಶೇಖರ್ ಸೇರಿಗಾರ್ ಇಂದು ಸಂಜೆ ಬಸ್ ಸಂಚಾರಗಳು ಕಡಿಮೆ ಆಗಿ ಕತ್ತಲಾಗುತ್ತಿದ್ದಂತೆ ಬ್ರಹ್ಮಾವರ ಮೆಸ್ಕಾಂನ ಸಿಬ್ಬಂದಿ ಕಾರ್ತಿಕ್, ಪದ್ಮನಾಭ, ಚಂದ್ರ, ಮುತ್ತು ಅವರು ಮರಳು, ಜಲ್ಲಿ ಕಲ್ಲು, ಸಿಮೆಂಟ್ ತಂದು ಗುಂಡಿಯನ್ನು ಸ್ವಚ್ಛಮಾಡಿ ಕಾಂಕ್ರೀಟ್ ಮಾಡಿ ಸಿಮೆಂಟ್ ರಸ್ತೆಯಂತೆ ಮಾಡಿದ್ದಾರೆ. ಹಾಗೂ ಇಲ್ಲಿನ ಆಟೋ ಚಾಲಕರೂ ಸಹಾ ಸೇರಿಕೊಂಡು ನೆರವಾಗಿದ್ದಾರೆ.

ಕರಾವಳಿ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಮತ್ತು ಕಳಪೆ ಕಾಮಗಾರಿಗೆ ರಸ್ತೆ ಗುಂಡಿ ಬೀಳುವುದು ಸಾಮಾನ್ಯವಾಗಿದ್ದು ಜನರು ಬಾಳೆ ಗಿಡ ನೆಟ್ಟು, ಈಜಾಡಿ, ಯಾವೂದೊ ಸಂಘಟನೆಯ ಶಾಲು ಹಾಕಿಕೊಂಡು ಪ್ರತಿಭಟನೆ ಮಾಡುವವರ ಬದಲು ಇಂತಹ ಕಾರ್ಯ ಮಾಡಿ ಮಾದರಿಯಾಗಿದ್ದಾರೆ. ಹಾಗೂ ಸಾರ್ವಜನಿಕರ ಪ್ರಶಂಗೆ ಪಾತ್ರರಾಗಿದ್ದಾರೆ.

Edited By : Shivu K
Kshetra Samachara

Kshetra Samachara

21/09/2022 10:09 am

Cinque Terre

6.66 K

Cinque Terre

0