ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪ್ರತಿಮೆ, ಸರ್ಕಲ್‌ಗಳನ್ನು ಆಮೇಲೆ ಮಾಡಿ: ಮೊದಲು ರಸ್ತೆ ರಿಪೇರಿ ಮಾಡಿ ಸ್ವಾಮೀ!

ವರದಿ: ರಹೀಂ ಉಜಿರೆ

ಉಡುಪಿ: ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯೂ ಸೇರಿದಂತೆ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಕರಾವಳಿಯಲ್ಲಿ ಉಪ್ಪು ನೀರಿನ ಸಮಸ್ಯೆ ಮತ್ತು ಅಧಿಕ ಮಳೆಯಿಂದಾಗಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರಸ್ತೆಗಳು ಹಾಳಾಗಿವೆ. ಆದರೆ ನಮ್ಮ‌ ಜನಪ್ರತಿನಿಧಿಗಳು ಪ್ರತಿಮೆ ಮತ್ತು ಸರ್ಕಲ್ ನಿರ್ಮಾಣ ರಾಜಕೀಯದಲ್ಲಿ ಬ್ಯುಸಿಯಾಗಿದ್ದು ಜನರಿಂದ ಆಕ್ರೋಶ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಮಳೆ ಬಿಟ್ಟ ನಂತರ ರಸ್ತೆ ರಿಪೇರಿ‌ ಮಾಡುತ್ತೇವೆ ಎನ್ನುತ್ತಿದ್ದ ಜನಪ್ರತಿನಿಧಿಗಳು ಇನ್ನೂ ಕಾರ್ಯಪ್ರವೃತ್ತರಾಗಿಲ್ಲ. ರಸ್ತೆಗಳು ಪ್ರತೀ ಮಳೆಗಾಲಕ್ಕೂ ಹದಗೆಡುವುದು ಸಾಮಾನ್ಯ. ಆದರೆ ಈ ಬಾರಿ ಸಂಚರಿಸಲು ಆಗದಷ್ಟು ಹದಗೆಟ್ಟಿವೆ. ಈ‌ ಮಧ್ಯೆ ಸಾರ್ವಜನಿಕರೇ ಸೇರಿ ಅಲ್ಲಲ್ಲಿ ರಸ್ತೆಗೆ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ‌ ಮಳೆಗಾಲಕ್ಕೆ ಹದಗೆಟ್ಟ ರಸ್ತೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಟ್ರೋಲ್ ಗೆ ಒಳಗಾದರೂ ಜನಪ್ರತಿನಿಧಿಗಳು ಮಾತ್ರ ಇನ್ನೂ ಎಚ್ಚೆತ್ತಿಲ್ಲ. ಅವರು ಬರೀ ಸಾವರ್ಕರ್ ಸರ್ಕಲ್ ಮತ್ತೊಂದು ಸರ್ಕಲ್ ನಿರ್ಮಾಣ ರಾಜಕೀಯದಲ್ಲಿ ಬ್ಯುಸಿಯಾಗಿದ್ದು ,ಈ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಳೆದ ಎರಡು ತಿಂಗಳಿನಿಂದ ಇಲ್ಲಿ ರಸ್ತೆ ಹದಗೆಟ್ಟ ಕಾರಣಗಳಿಗೆ ಆದ ಸಾವು ನೋವುಗಳಿಗೆ ಲೆಕ್ಕವೇ ಇಲ್ಲ. ಇನ್ನು ವೃದ್ಧರು ಮಹಿಳೆಯರು‌ ಮತ್ತು ಮಕ್ಕಳು ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿ ಒಂದಿಲ್ಲೊಂದು ತೊಂದರೆಗೆ ಒಳಗಾಗಿದ್ದಾರೆ. ಇದೀಗ ಮಳೆ ಬಿಟ್ಟಿದ್ದರೂ ನಮ್ಮ ರಾಜಕಾರಣಿಗಳು ರಸ್ತೆ ಹೊಂಡ ಮುಚ್ಚಿಸಲು ಮೀನಾಮೇಷ ಎಣಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕರಾವಳಿಯ ರಾಜಕಾರಣಿಗಳು ಜನರ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವಲ್ಲಿ ತೊಡಗಿದ್ದಾರೆ. ಜನರ ಮೂಲಭೂತ ಸೌಲಭ್ಯಗಳ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂದು ಪ್ರಜ್ಞಾವಂತರು ಮಾತಾಡಿಕೊಳ್ಳುತ್ತಿದ್ದಾರೆ.

Edited By : Nagesh Gaonkar
PublicNext

PublicNext

20/09/2022 07:04 pm

Cinque Terre

23.81 K

Cinque Terre

3

ಸಂಬಂಧಿತ ಸುದ್ದಿ