ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ವಿವಿಧ ಬೇಡಿಕೆ ಮುಂದಿಟ್ಡು ಸಿಪಿಎಂನಿಂದ ಪಂಚಾಯತ್ ಎದುರು ಪ್ರತಿಭಟನೆ

ಕುಂದಾಪುರ: ಸಿಪಿಎಂ ಪಕ್ಷದ ವತಿಯಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಹೆಮ್ಮಾಡಿ ಗ್ರಾಮ ಪಂಚಾಯತ್ ಎದುರು ಇಂದು ಪ್ರತಿಭಟನೆ ನಡೆಸಲಾಯಿತು.

ಕಾಸನಾಡಿ ಬೊಬ್ಬರ್ಯ ದೈವಸ್ಥಾನ -ನಡುಬೆಟ್ಟು ರಸ್ತೆಯ ಕಾಂಕ್ರೀಟಿಕರಣ ಪೂರ್ಣಗೊಳಿಸಬೇಕು. ಹೆಮ್ಮಾಡಿ ಪೇಟೆಯ ಕೊಲ್ಲೂರು ರಸ್ತೆಯ ಪ್ರದೇಶದಲ್ಲಿ ಭಟ್ರಬೆಟ್ಟು ಮನೆಗಳಿಗೆ ನುಗ್ಗುತ್ತಿರುವ ನೀರನ್ನು ತಡೆಯಲು ಚರಂಡಿ ವ್ಯವಸ್ಥೆ ಮಾಡಬೇಕು. ಕಟ್ಟಿನ ರಸ್ತೆಯ ಬದಿಯಲ್ಲಿರುವ ಸುಗ್ಗಿ ತೋಡಿನ ಹೂಳೆತ್ತಬೇಕು. ಹೆಮ್ಮಾಡಿ ಕೊಟ್ಟು ರಸ್ತೆಯ ಕೃಷಿ ಭೂಮಿ ಮುಳುಗಡೆ ತಪ್ಪಿಸಲು ಚರಂಡಿ ವ್ಯವಸ್ಥೆ ದುರಸ್ತಿ ಮಾಡಬೇಕು. ಕನ್ನಡಕುದ್ರು, ಕಟ್ಟು, ಸಂತೋಷ ನಗರಗಳಿಗೆ ಹಲವಾರು ವರ್ಷಗಳ ಬೇಡಿಕೆಯಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕು ಎಂದು ಈ ಸಂದರ್ಭ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸುಧಾಕರ ಎನ್ ದೇವಾಡಿಗ, ಮಾಜಿ ಅಧ್ಯಕ್ಷ ಸತ್ಯನಾರಾಯಣ ರಾವ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಬಿಲ್ಲವ ಮನವಿ ಸ್ವೀಕರಿಸಿದರು.

Edited By : PublicNext Desk
Kshetra Samachara

Kshetra Samachara

26/08/2022 08:53 pm

Cinque Terre

2.74 K

Cinque Terre

0

ಸಂಬಂಧಿತ ಸುದ್ದಿ