ಉಳೆಪಾಡಿ: ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ ಪದವು ಎಂಬಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆ ಕುಸಿದು ಮೂವರು ಪವಾಡ ಸದೃಶ ಪಾರಾಗಿದ್ದಾರೆ.
ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ಸುರಿದ ಭಾರೀ ಮಳೆಗೆ ಏಕಾಏಕಿ ಮನೆಯ ಒಂದೊಂದು ಭಾಗ ಕುಸಿತವಾಗುತ್ತಿರುವುದನ್ನು ಕಂಡು ಭಯಭೀತರಾಗಿ ಮನೆಯೊಳಗೆ ಮಲಗಿದ್ದ ರಾಜು ಮುಖಾರಿ, ಮೀನಾ ಹಾಗೂ ರವಿ ಹೊರಗೆ ಓಡಿ ಜೀವಪಾಯದಿಂದ ಪಾರಾಗಿದ್ದಾರೆ. ಬಳಿಕ ಸಂಪೂರ್ಣ ಮನೆ ಕುಸಿತ ಕಂಡಿದ್ದು ಮನೆಯ ದಾಖಲೆ ಪತ್ರಗಳು ಹಾಗೂ ಬಟ್ಟೆ ಬರೆ, ಪಾತ್ರೆ ಸಾಮಾನು ಮಣ್ಣಿನೊಳಗೆ ಧರಶಾಹಿಯಾಗಿದೆ. ತೀರಾ ಬಡವರಾಗಿರುವ ರಾಜು ಮುಖಾರಿ ಮನೆ ಕುಸಿತದಿಂದ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಐಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಸದಸ್ಯ ಕಲಾವತಿ ಭೇಟಿ ನೀಡಿ ಪರಿಶೀಲಿಸಿದ್ದು ಮನೆಯ ಮಾಡಿಗೆ ತರ್ಪಾಲು ಹೊದಿಸಲಾಗಿದೆ.
ವಿಶೇಷವೆಂದರೆ ಕಳೆದ ಕೆಲ ದಿನಗಳ ಹಿಂದೆ ರಾಜ್ಯಮಟ್ಟದಲ್ಲಿ ಕೈಗಾರಿಕೆಗಳನ್ನು ವಿರೋಧಿಸಿ ಸುದ್ದಿಯಾಗಿದ್ದ ಬಳ್ಕುಂಜೆ, ಉಳೆಪಾಡಿ , ಕೊಲ್ಲೂರು ಗ್ರಾಮಗಳ ಸುಮಾರು 1091 ಎಕರೆ ಕೈಗಾರಿಕೆಗಳ ಸರಕಾರದ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಉಳೆಪಾಡಿ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆ ನಕ್ಷೆಯಲ್ಲಿ ರಾಜು ಮುಖಾರಿ ಮನೆ ಕೈ ಬಿಡಲಾಗಿದ್ದು ಮನೆಯ ಸಮೀಪದ ಎಲ್ಲಾ ಜಮೀನುಗಳು ಭೂಸ್ವಾಧೀನದ ನಕ್ಷೆಯಲ್ಲಿ ಇದೆ.
Kshetra Samachara
24/08/2022 11:10 am