ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಬಿಕರ್ನಕಟ್ಟೆ ಸಮೀಪ ರಸ್ತೆ ಅಪಘಾತದಲ್ಲಿ ಆತೀಶ್ ಸಾವಿಗೀಡಾಗಿದ್ದು, ಇದಕ್ಕೆ ರಸ್ತೆ ಗುಂಡಿಗಳೇ ಕಾರಣ ಎಂದು ಆರೋಪಿಸಿ ಅವರ ಸ್ನೇಹಿತ ಲಿಖಿತ್ ರೈ ಏಕಾಂಗಿಯಾಗಿ ಮಂಗಳೂರು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಗಮನ ಸೆಳೆದ ಬೆನ್ನಲ್ಲೇ ರಾ.ಹೆದ್ದಾರಿಯ ಗುಂಡಿ ಮುಚ್ಚುವ ಕಾರ್ಯಕ್ಕೆ ಆಡಳಿತ ಮುಂದಾಗಿದೆ.
ಶನಿವಾರ ಪಡೀಲ್ ಬಳಿ ಹೆದ್ದಾರಿಯ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದೆ.
ಕಂಡೆಟ್ಟು ಕ್ರಾಸ್ ಬಳಿ ಆ.5 ರಂದು ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಆತೀಷ್ ಮೃತಪಟ್ಟಿದ್ದರು. ಆತೀಷ್ ರ ಸ್ನೇಹಿತ ಲಿಖಿತ್ ರೈ ಗುರುವಾರದಿಂದ ಮಂಗಳೂರು ಮನಪಾ ಕಚೇರಿ ಎದುರು ಏಕಾಂಗಿಯಾಗಿ ಪ್ರತಿ ಭಟಿಸಿ ಆಡಳಿತ ವ್ಯವಸ್ಥೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 2ನೇ ದಿನವಾದ ಶುಕ್ರವಾರ ಈ ಪ್ರತಿಭಟನೆ ನಡೆಯಿತು.
'ಸುಗಮ ಸಂಚಾರಕ್ಕಾಗಿ ಉತ್ತಮ ರಸ್ತೆ ನಿರ್ಮಿಸಿ' ಆಗ್ರಹದೊಂದಿಗೆ ನಾಗರಿಕರ ಸಹಕಾರದೊಂದಿಗೆ 'ಪಾಥ್ ಹೋಲ್ಸ್ ಅಭಿಯಾನವನ್ನು ಆರಂಭಿಸಿದ್ದ ಲಿಖಿತ್ ರೈ ಬಂಟ್ವಾಳದಿಂದ ಸುರತ್ಕಲ್ ಎನ್ ಐಟಿಕೆ ಟೋಲ್ ಗೇಟ್ ವರೆಗಿನ ಹೆದ್ದಾರಿಯಲ್ಲದೆ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಿಸಲು ಜನ ಪ್ರತಿನಿಧಿಗಳು, ಅಧಿಕಾರಿಗಳು ಮುಂದಾ ಗಬೇಕು ಎಂದು ಒತ್ತಾಯಿಸಿದ್ದರು.
Kshetra Samachara
13/08/2022 01:41 pm