ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಸಾಂತೇರಿಯಲ್ಲೊಂದು ಅಪಾಯಕಾರಿ ಮರದ ಕಾಲು ಸಂಕ

ಬೈಂದೂರು : ಬೈಂದೂರು ತಾಲೂಕಿನ ಎಳಜಿತ ಗ್ರಾಮದ ಸಾಂತೇರಿ ಮತ್ತು ಬಾಳೆ ಗದ್ದೆ ನಡುವೆ ಇರುವ ನದಿಗೆ, ಅಡ್ಡಲಾಗಿ ಹಾಕಿರುವ ಅಪಾಯಕಾರಿ ಮರದ ಕಾಲುಸಂಕ ಪತ್ತೆಯಾಗಿದೆ. ಹೌದು ಊರಿನವರೇ ನಿರ್ಮಿಸಿದ ಈ ಕಾಲುಸಂಕ ಇದೀಗ ಅಪಾಯದ ಅಂಚಿನಲ್ಲಿದೆ.

ಈ ಕಾಲುಸಂಕದ ಮೂಲಕ ದಿನಾಲು ಸುಮಾರು ಆರರಿಂದ ಎಂಟು ಮಕ್ಕಳು ಎರಡರಿಂದ ಮೂರು ಕಿಲೋಮೀಟರ್ ನಡೆದುಕೊಂಡು, ದೂರದ ಏಳಜಿತ್ ಗ್ರಾಮಕ್ಕೆ ಬರಬೇಕಾದಂತ ಪರಿಸ್ಥಿತಿ ಇದೆ. ಹೊಳೆ ದಾಟುವಾಗ ಮಕ್ಕಳ ಅವಸ್ಥೆ ನೋಡಿದರೆ ತುಂಬಾ ಕಷ್ಟವಾಗುತ್ತದೆ.

ಮಕ್ಕಳನ್ನು ಪೋಷಕರು ಕಷ್ಟಪಟ್ಟು ಈ ಸಂಕದ ಮೂಲಕ ಹೊಳೆಯನ್ನು ದಾಟಿಸಬೇಕಾಗುತ್ತದೆ. ಮಳೆ ಬರುವಾಗ ಮಕ್ಕಳ ಸ್ಕೂಲ್ ಬ್ಯಾಗ್, ಕೊಡೆ ಹಿಡಿದುಕೊಂಡು, ಮಕ್ಕಳನ್ನೂ ಜೋಪಾನವಾಗಿ ಈ ಸಂಕ ದಾಟಿಸುವುದು ತುಂಬಾ ಕಷ್ಟಕರ. ಇಂತಹ ಸ್ಥಿತಿಯಲ್ಲಿ ಮಕ್ಕಳು ಶಾಲೆಗೆ ಹೋಗಿ ವಾಪಸ್ಸು ಬರುತ್ತಾರೋ ಇಲ್ವೋ ಎಂಬುದೇ ಮನೆಯವರಿಗೆ ಆತಂಕದ ಸಂಗತಿಯಾಗಿದೆ. ಸನ್ನಿಧಿ ಇದೇ ತರಹದ ಕಾಲುಸಂಕದಲ್ಲಿ ದಾಟುವಾಗ ಜಾರಿ ಬಿದ್ದು ಕೊಚ್ಚಿ ಹೋಗಿದ್ದಾಳೆ. ಅದ್ರಿಂದ ಮತ್ತೆ ಅಂತಹದ್ದೇ ಅನಾಹುತವಾಗುವ ಮುನ್ನ ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ.

ಈ ಕಾಲುಸಂಕದ ಬದಲಿಗೆ ಕಿರು ಸೇತುವೆ ನಿರ್ಮಿಸಿ ಎಂದು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾಂತೇರಿ ನಿವಾಸಿ ಉದಯ ಎಸ್ ಕೋಟ್ಯಾನ್ ಅಳಲು ತೋಡಿಕೊಂಡಿದ್ದಾರೆ.

Edited By : Shivu K
Kshetra Samachara

Kshetra Samachara

10/08/2022 04:02 pm

Cinque Terre

7.67 K

Cinque Terre

1