ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಮಹಾಮಳೆಗೆ ರಾಷ್ಟ್ರೀಯ ಹೆದ್ದಾರಿ ಛಿದ್ರ: ತೇಪೆ ಕಾರ್ಯ ಚುರುಕು!

ಬೈಂದೂರು: ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಮೊನ್ನೆ ಒಂದೇ ದಿನ ಸುರಿದ ಮಹಾಮಳೆಗೆ ಕೋಟ್ಯಂತರ ರೂ.ನಷ್ಟವಾಗಿದೆ. ಮನೆಗಳಿಗೆ, ದೋಣಿಗಳಿಗೆ ಮತ್ತು ಕೃಷಿ ಭೂಮಿಗಳಿಗೆ ಸಾಕಷ್ಟು ಹಾನಿಯಾಗಿದೆ. ಈ ಮಧ್ಯೆ ಬೈಂದೂರು ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಕೆಲವೆಡೆ ಛಿದ್ರಗೊಂಡಿದೆ.

ಮಳೆ ಬಂದಿದ್ದು ಕೇವಲ ಒಂದೇ ದಿನ. ಆದರೆ ಕೋಟಿ ಕೋಟಿ ವ್ಯಯಿಸಿದ ಬೈಂದೂರು ರಾಷ್ಟ್ರೀಯ ಹೆದ್ದಾರಿ (NH-66)ಯ ಅವ್ಯವಸ್ಥೆ ಹೇಳತೀರದು. ಅದರಲ್ಲೂ ಬೈಂದೂರು ಒತ್ತಿನೆಣೆಯಿಂದ ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿ ಈ ಮಟ್ಟಿಗೆ ಹಾಳಾಗಿರುವುದಕ್ಕೆ ಕೇವಲ ಮಳೆಯ ಅಬ್ಬರ ಒಂದೇ ಕಾರಣವಲ್ಲ.

ಇಲ್ಲಿ ಜನಪ್ರತಿನಿಧಿಗಳು, ಗುತ್ತಿಗೆದಾರರು, ಈ ರಸ್ತೆಯ ಗುಣಮಟ್ಟ ಪರೀಕ್ಷಿಸಿದ ಎಂಜಿನಿಯರ್, ಅಧಿಕಾರಿಗಳು ಕೂಡ ಹೊಣೆಗಾರರು ಎಂದು ಈ ಭಾಗದ ಜನ ಮಾತಾಡಿಕೊಳ್ಳುತ್ತಿದ್ದಾರೆ. ಹೆಜ್ಜೆ ಹೆಜ್ಜೆಗೂ ಟೋಲ್ ಕಟ್ಟಿದರೂ ಕಳಪೆ ರಸ್ತೆಯಲ್ಲಿ ಸಂಚರಿಸಬೇಕಾಗಿದೆ ಎಂದು ವಾಹನ ಸವಾರರು ಶಾಪ ಹಾಕುತ್ತಿದ್ದಾರೆ. ಇದೀಗ ಬಂದ ವರ್ತಮಾನಗಳ ಪ್ರಕಾರ ಈ ಭಾಗದಲ್ಲಿ ಹಾಳಾದ ರಸ್ತೆಗೆ ತೇಪೆ ಹಾಕುವ ಕಾರ್ಯ ನಡೆದಿದೆ.

Edited By : Nagesh Gaonkar
Kshetra Samachara

Kshetra Samachara

03/08/2022 06:00 pm

Cinque Terre

7.49 K

Cinque Terre

4

ಸಂಬಂಧಿತ ಸುದ್ದಿ