ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಸೌಪರ್ಣಿಕಾದಲ್ಲಿ ನೆರೆ ಹಾವಳಿ: ಎಸಿ ರಾಜು ಭೇಟಿ,ಸ್ಥಳೀಯರಿಗೆ ಲೈಫ್ ಜಾಕೆಟ್ ಹಂಚಿಕೆ

ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಗ್ರಾಮದಲ್ಲಿ ನೆರೆ ಉಂಟಾಗಿದೆ.ಮುಖ್ಯವಾಗಿ ಇಲ್ಲಿ ಹರಿಯುತ್ತಿರುವ ಸೌಪರ್ಣಿಕಾ ನದಿ ತಟದಲ್ಲಿ ಕಳೆದೆರಡು ದಿನಗಳಿಂದ ನೆರೆ ಹಾವಳಿಯಿಂದ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗಿದೆ.

ಇವತ್ತು ನೆರೆ ಪೀಡಿತ ಬಡಾಕೆರೆ ಗ್ರಾಮಕ್ಕೆ ಕುಂದಾಪುರ ಸಹಾಯಕ ಕಮಿಷನರ್ ರಾಜು ಆಗಮಿಸಿ ಸ್ಥಳೀಯರ ಅಹವಾಲು ಆಲಿಸಿದರು.

ನೆರೆಪೀಡಿತ ಪ್ರದೇಶದ ಜನರ ಜೊತೆ ಮಾತುಕತೆ ನಡೆಸಿದ ಅವರು , ದೋಣಿ ನಡೆಸುವವರಿಗೆ ಲೈಫ್ ಜಾಕೆಟ್- ಟ್ಯೂಬ್ ಹಂಚಿಕೆ ಮಾಡಿದರು.ಜನರನ್ನು ಕರೆದುಕೊಂಡು ಬರುವ ಯುವಕರಿಗೆ ಜಾಕೆಟ್ ಹಂಚಿದ ಎಸಿ ರಾಜು ,ಹೆಚ್ಚುವರಿ ಲೈಫ್ ಜಾಕೆಟ್ ಟ್ಯೂಬ್ ನೀಡುವ ಭರವಸೆ ನೀಡಿದರು.

Edited By :
Kshetra Samachara

Kshetra Samachara

09/07/2022 01:50 pm

Cinque Terre

6.78 K

Cinque Terre

0