ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಗ್ರಾ.ಪಂ ಸದಸ್ಯೆ ಮನೆ ನಿರ್ಮಾಣಕ್ಕೆ ಮಾಡೂರು ಸಾಯಿ ಮಂದಿರದಿಂದ 25,000 ರೂ. ಸಹಾಯಧನ ವಿತರಣೆ

ಉಳ್ಳಾಲ: ಕಿನ್ಯ ಗ್ರಾಮ ಪಂಚಾಯತ್ ಸದಸ್ಯೆ ಭಾಗಿಯವರಿಗೆ ನೂತನವಾಗಿ ಮನೆ ನಿರ್ಮಾಣಗೊಳ್ಳುತ್ತಿದ್ದು ಮಾಡೂರು ಶ್ರೀ ಸಾಯಿ ಮಂದಿರದ ವತಿಯಿಂದ 25,000 ರೂಪಾಯಿ ಸಹಾಧನವನ್ನು ವಿತರಿಸಲಾಯಿತು.

ಸಾಯಿ ಮಂದಿರದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಪಿ ಅವರು 25,000 ರೂಪಾಯಿ ಮೊತ್ತದ ಚೆಕ್ಕನ್ನು ಭಾಗಿಯವರಿಗೆ ಹಸ್ತಾಂತರಿಸಿದರು.

ಕಿನ್ಯ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಬೈಲಮೂಲೆ ಮಾತನಾಡಿ, ಸಮಾಜದ ಅಶಕ್ತರ ಬಗ್ಗೆ ಕಾಳಜಿ ಇರಿಸಿ ಅವರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸಹಾಯ ಹಸ್ತ ನೀಡುತ್ತ ಬಂದಿರುವ ಸಾಯಿ ಮಂದಿರದ ಸಾಮಾಜಿಕ ಕಳ ಕಳಿ ಶ್ಲಾಘನೀಯ. ಬಡವರ ಸೇವೆಯೇ ದೇವರ ಸೇವೆಯಾಗಿದ್ದು ಇಂತಹ ಸತ್ಕಾರ್ಯಗಳಿಂದ‌ ದೇವರನ್ನ ಕಾಣುವ ಕಾರ್ಯವನ್ನ ಕೆ.ಪಿ ಸುರೇಶ್ ಅವರು ನಡೆಸುತ್ತಿದ್ದಾರೆ ಎಂದರು.

ಮಾಜಿ ಪಂಚಾಯತ್ ಸದಸ್ಯರಾದ ಶೇಖರ್, ಸಾಯಿ ಮಂದಿರ ಸೇವಾ ಸಮಿತಿ ಅಧ್ಯಕ್ಷರಾದ ನವೀನ್ ಕಂಬ್ಲಕೋಡಿ,ಸದಸ್ಯರಾದ ಅಮರನಾಥ್ ಮಾಡೂರು, ನಿತೇಶ್ ಕೊಲ್ಯ,ಜಗದೀಶ್ ಕಿನ್ಯ,ಸೋಮನಾಥ,ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯರಾದ ನವೀನ್ ಕೊಂಡಾಣ,ಮಂದಿರದ ಅರ್ಚಕರಾದ ಶೈಲೇಶ್ ಶಾಂತಿ,ಟ್ರಸ್ಟಿಗಳಾದ ರವಿ ಕೊಂಡಾಣ ಮೊದಲಾದವರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

08/07/2022 03:45 pm

Cinque Terre

3.07 K

Cinque Terre

0

ಸಂಬಂಧಿತ ಸುದ್ದಿ