ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಸನ್ ಶೈನ್ ಬಡಾವಣೆ ನಿವಾಸಿಗಳ ಮೂಲಭೂತ ಸಮಸ್ಯೆ ಶೀಘ್ರದಲ್ಲಿ ಪರಿಹರಿಸಲಾಗುವುದು!

ಕಾಪು: ಪುರಸಭಾ ವ್ಯಾಪ್ತಿಯ‌ ಮಲ್ಲಾರು ಸನ್ ಶೈನ್ ನಿವಾಸಿಗಳ ಬಡಾವಣೆಯ ಮುಖ್ಯದ್ವಾರ ಹಾಗೂ ಕಾಂಕ್ರೀಟೀಕರಣಗೊಂಡ ಧೂಮಾವತಿ ಮುಖ್ಯರಸ್ತೆಯ ಉದ್ಘಾಟನೆಯನ್ನು ಕಾಪು ಶಾಸಕ ಲಾಲಾಜಿ ಮೆಂಡನ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಮಲ್ಲಾರು ಭಾಗದ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಅನುದಾನ ನೀಡಲಾಗಿದ್ದು, ಮುಂದೆಯೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು. ಇಲ್ಲಿಯ ಮೂಲಭೂತ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಲಾಗುವುದು ಎಂದರು.

ಸನ್ ಶೈನ್‌ ಬಡಾವಣೆ ಸೇರಿದಂತೆ ಮಲ್ಲಾರು ಪರಿಸರದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ, ದಾರಿದೀಪ ವ್ಯವಸ್ಥೆ ಕಲ್ಪಿಸುವಂತೆ ಶಾಸಕರಲ್ಲಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಶೈಲೇಶ್ ಅಮೀನ್,ಹರಿಣಾಕ್ಷಿ ದೇವಾಡಿಗ, ಮಾಜಿ ಸದಸ್ಯೆ ಶಾಂತಲತಾ ಶೆಟ್ಟಿ, ಸನ್ ಶೈನ್ ಬಡಾವಣೆ ನಿವಾಸಿಗಳ ಸಂಫದ ಅಧ್ಯಕ್ಷರ ಎಸ್. ರವಿ, ಕಾರ್ಯದರ್ಶಿ ನಾರಾಯಣ್ ಶ್ರೀಯಾನ್, ಪ್ರಮುಖರಾದ ಸದಾಶಿವ, ರಮೇಶ್ ಪೂಜಾರಿ, ಉಮೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

04/07/2022 10:24 pm

Cinque Terre

4.51 K

Cinque Terre

0

ಸಂಬಂಧಿತ ಸುದ್ದಿ