ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ದುರಸ್ತಿಗೆಂದು ಇದ್ದ ರಸ್ತೆ ಅಗೆದು ಹಾಕಿದರು; ಈಗ 'ಕೈʼ ಕೊಟ್ಟು ಓಡಿ ಹೋದರು!

ಪುತ್ತೂರು: ಇದ್ದ ರಸ್ತೆಯನ್ನು ಅಗೆದು ಹಾಕಿ ವಾಹನ ಮತ್ತು ಜನ ಸಂಚಾರಕ್ಕೆ ದುಸ್ತರಗೊಳಿಸಿದ ಕೆ.ಆರ್.ಡಿ.ಸಿ.ಎಲ್. ಬೇಜವಾಬ್ದಾರಿ ವಿರೋಧಿಸಿ‌ ಪುತ್ತೂರು ತಾಲೂಕಿನ ಕೆಯ್ಯೂರು ದೇವಿನಗರ ನಿವಾಸಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ಕೆಯ್ಯೂರು ದೇವಿನಗರದಿಂದ ದೇರ್ಲ ಪರಿಶಿಷ್ಟ ಜಾತಿ ಕಾಲೊನಿಗೆ ಸಂಪರ್ಕಿಸುವ ಈ ರಸ್ತೆಯ 1 ಕಿ.ಮೀ. ವ್ಯಾಪ್ತಿಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಕೆ.ಆರ್.ಡಿ.ಸಿ.ಎಲ್. ಕೈಗೆತ್ತಿಕೊಂಡಿತ್ತು. ಕಾಮಗಾರಿ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ ರಸ್ತೆ ಸಂಪೂರ್ಣ ಅಗೆದು ತೆಗೆಯಲಾಗಿದ್ದು, ಹೊಸ ಬೋಲ್ಡರ್ಸ್ ಹಾಕಲಾಗಿದೆ.

20 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ‌ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರ ಹಣ ದೊರೆಯದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸಿ‌ ಹೋಗಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಬೋಲ್ಡರ್ಸ್ ಹಾಕಿ 2 ತಿಂಗಳು ಕಳೆದರೂ ಡಾಂಬರ್ ಹಾಕದ ಹಿನ್ನೆಲೆಯಲ್ಲಿ ಇದೀಗ ಈ ರಸ್ತೆಯಲ್ಲಿ ವಾಹನ ಬಿಡಿ, ಪಾದಚಾರಿಗಳಿಗೆ ನಡೆದಾಡಲೂ ಅಸಾಧ್ಯವಾಗಿದೆ!

ಗ್ರಾಮಸ್ಥರು ತಮ್ಮ ಈ ಸಂಚಾರ ಸಂಕಟವನ್ನು ಶಾಸಕ ಸಂಜೀವ ಮಠಂದೂರು ಗಮನಕ್ಕೆ ತಂದಿದ್ದರು. ಒಂದು ವಾರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಇದೀಗ 2 ತಿಂಗಳೇ ಕಳೆದಿದ್ದು, ಸಮಸ್ಯೆ ಪರಿಹಾರವೇ ಆಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

Edited By : Manjunath H D
Kshetra Samachara

Kshetra Samachara

28/06/2022 05:02 pm

Cinque Terre

3.45 K

Cinque Terre

0