ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ದಶಕಗಳ ಕನಸು ನನಸು: ಜಾರು ಕುದ್ರುವಿಗೆ ಸಂಪರ್ಕ ಕೊಂಡಿಯಾದ ಹೊಸ ಸೇತುವೆ

ವಿಶೇಷ ವರದಿ: ರಹೀಂ ಉಜಿರೆ

ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ

ಕಾಪು: ಇದೊಂದು ಪುಟ್ಟ ಊರು. ಊರ ಸುತ್ತಲೂ ನೀರು.ಶ್ರಮಜೀವಿಗಳಾದ ಈ ಗ್ರಾಮದ ಜನ ತಮ್ಮೂರಿಗೊಂದು ಸಂಪರ್ಕ ಸೇತುವೆಗಾಗಿ ದಶಕಗಳ ಕಾಲ ಕಾದಿದ್ದರು.ಇದೀಗ ಈ ಊರ ಜನರ ಬಹುದಿನಗಳ ಕನಸು ನನಸಾಗಿದೆ...ಈ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ...

ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ಕುದ್ರುಗಳಿವೆ. ಸುತ್ತಲೂ ನೀರಿನಿಂದಾವೃತವಾದ ಊರಿಗೆ ಈ ಭಾಗದಲ್ಲಿ ಕುದ್ರು ಅಂತ ಕರೀತಾರೆ. ಜಾರು ಕುದ್ರು ಕಾಪು ವಿಧಾನಸಭಾ ಕ್ಷೇತ್ರದಲ್ಲಿದೆ. ಈ ಕುದ್ರುವಿನ ಜನ, ಸಂಪರ್ಕ ಸೇತುವೆ ಇಲ್ಲದೇ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬೆಳಿಗ್ಗೆ ಶಾಲಾ ಮಕ್ಕಳು ದೋಣಿ ಹತ್ತಿ ದಡ ದಾಟಬೇಕು.ಕೆಲಸಕ್ಕೆ ಹೋಗುವವರು ದೋಣಿ ಮೂಲಕ ಹೋಗಬೇಕು.ಇನ್ನು ಅನಾರೋಗ್ಯಗೊಂಡಾಗ ಈ ಗ್ರಾಮಸ್ಥರ ಪಾಡು ಹೇಳತೀರದು. ಯಾಕೆಂದರೆ ತಡರಾತ್ರಿ ಅನಾರೋಕ್ಕೀಡಾದರೂ ದೋಣಿಯನ್ನು ಕಾಯಲೇಬೇಕು...

ಹೀಗೆ ಈ ಗ್ರಾಮಸ್ಥರು ದಶಕಗಳಿಂದ ದೋಣಿಯನ್ನು ಅವಲಂಬಿಸಿದ್ರು. ಕೊನೆಗೂ ಜನಪ್ರತಿನಿಧಿಗಳಿಗೆ ಈ ಭಾಗದ ಜನರ ಕಷ್ಟ ಗೊತ್ತಾಯಿತೇನೋ. ನಾಲ್ಕು ವರ್ಷಗಳ ಹಿಂದೆ ಏಳು ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿ ಈಗ ಪೂರ್ಣಗೊಂಡಿದೆ.

ಕೊನೆಗೂ ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಅನುಭವಿಸುವುದು ತಪ್ಪಿತು ಎಂದು ಇಲ್ಲಿನ ಹಿರಿಯರು ನಿಟ್ಟುಸಿರು ಬಿಟ್ಟಿದ್ದಾರೆ.. ಗ್ರಾಮದ ಜನ ಖುಷಿಗೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

10/06/2022 06:46 pm

Cinque Terre

11.13 K

Cinque Terre

0