ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಎನ್‌ಎಂಪಿಟಿ ಬಂದರು ಪ್ರಾಧಿಕಾರದ ನೂತನ ಟ್ರಸ್ಟಿ ಭರತ್ ಕುಮಾರ್‌ಗೆ ಅಭಿನಂದನಾ ಸಮಾರಂಭ

ಸುರತ್ಕಲ್: ನವಮಂಗಳೂರು ಬಂದರು ಪ್ರಾಧಿಕಾರದ ನೂತನ ಟ್ರಸ್ಟಿಯಾಗಿ ನೇಮಕಗೊಂಡಿರುವ ಭರತ್ ಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಬುಧವಾರ ಪಣಂಬೂರು ಜೆಎನ್‌ಸಿ ಹಾಲ್‌ನಲ್ಲಿ ಜರುಗಿತು.

ಈ ವೇಳೆ ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಮಾಹಿತಿ ನೀಡಿ, ಹಿಂದೆ ನವಮಂಗಳೂರು ಬಂದರು ಟ್ರಸ್ಟ್ ಹೆಸರು ಬದಲಾಯಿಸಿ ಪ್ರಾಧಿಕಾರ ಮಾಡಲಾಗಿದೆ. ಎಲ್ಲವನ್ನು ಕೇಂದ್ರ ಸರಕಾರ ನಿಭಾಯಿಸುತ್ತಿತ್ತು. ಈಗ ಪ್ರಾಧಿಕಾರದಲ್ಲಿ ಕೇಂದ್ರ ಸರಕಾರ, ರಕ್ಷಣಾ ಇಲಾಖೆ ಸೇರಿ 9 ಮಂದಿ ಸದಸ್ಯರಿದ್ದಾರೆ. ಮೇ 26ರಂದು ಕೇಂದ್ರ ಸರಕಾರ ಹೊಸದಾಗಿ ಆದೇಶ ಮಾಡಿದೆ‌ ಅದರಲ್ಲಿ ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ಇಂಟಕ್ ಕಾರ್ಮಿಕ ಸಂಘಟನೆಯನ್ನು ಪ್ರತಿನಿಧಿಸುವ ಭರತ್ ಕುಮಾರ್ ಆಯ್ಕೆ ಮಾಡಿ ಕಳಿಸಿದ್ದೇವೆ. ಬಂದರು ನಿರ್ಮಾಣಕ್ಕಾಗಿ ಭೂಮಿ ಬಿಟ್ಟು ಕೊಟ್ಟ ಮೊಗವೀರ ಸಮಾಜಕ್ಕೆ, ಸ್ಥಳೀಯ ನಿರ್ವಸಿತ ಮೊಗವೀರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಇವರ ಆಯ್ಕೆ ನಮಗೆ ಸಂತಸ ತಂದಿದೆ ಎಂದರು. ಬಂದರಿನಲ್ಲಿ ಕೆಲಸ ಮಾಡುವವರನ್ನೇ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂಬ ಕೇಂದ್ರ ಸರಕಾರದ ಆದೇಶದನ್ವಯ ಭರತ್ ಕುಮಾರ್ ಅವರನ್ನು ನೇಮಕ ಮಾಡಿದ್ದೇವೆ. ಇದಕ್ಕಾಗಿ ಸಹಕರಿಸಿದ ಇಂಟಕ್ ಸಂಘಟನೆಯ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಬಳಿಕ ನೂತನ ಟ್ರಸ್ಟಿ ಭರತ್ ಕುಮಾರ್ ಮಾತಾಡಿ, ಮುಖ್ಯವಾಗಿ ಮೊಗವೀರರಿಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡಲಾಗುವುದು. ಕಾರ್ಮಿಕರ ಸೇವೆಯನ್ನು ಮುಂದುವರಿಸಿಕೊಂಡು ಹೋಗಲಾಗುವುದು. ಇದು ಪ್ರಥಮ ಬಾರಿಗೆ ಸಿಕ್ಕ ಅವಕಾಶವಾಗಿದ್ದು ಮೊಗವೀರರು ಮತ್ತು ಕರಾವಳಿಯ ಕಾರ್ಮಿಕರು ಇದರ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

Edited By :
Kshetra Samachara

Kshetra Samachara

08/06/2022 10:10 pm

Cinque Terre

20.98 K

Cinque Terre

0