ಕಾಪು: ಪಡುಬಿದ್ರಿಯ ಕಾರಣೀಕ ಸ್ಥಳದಲ್ಲಿ ಒಂದಾದ ಕಂಚಿನಡ್ಕ ಮಿಂಚಿನ ಬಾವಿ ಕ್ಷೇತ್ರದಲ್ಲಿ ಭುಗಿಲೆದ್ದ ಮೇಲ್ಛಾವಣಿ ಹಾಸುವ ವಿಚಾರಕ್ಕೆ ಸ್ಥಳೀಯ ಅನ್ಯಕೋಮಿನ ಮನೆಮಂದಿ ಆಕ್ಷೇಪ ವ್ಯಕ್ತದ ಹಿನ್ನೆಲೆಯಲ್ಲಿ ಸೌಹಾರ್ದಕ್ಕೆ ಎಲ್ಲಿ ಧಕ್ಕೆಯಾಗುತ್ತೋ ಎಂಬ ಆತಂಕದಲ್ಲಿದ್ದ ಸಂದರ್ಭ ಗ್ರಾ.ಪಂ.ಗೆ ಆಕ್ಷೇಪ ವ್ಯಕ್ತ ಪಡಿಸಿದವರೇ ಅದನ್ನು ಮರಳಿ ಪಡೆಯುವ ಮೂಲಕ ಸಮಸ್ಯೆ ಬಹುತೇಕ ತಿಳಿಗೊಂಡು ಜನರಿಂದ ಹರ್ಷ ವ್ಯಕವಾಗಿದೆ.
ಆಕ್ಷೇಪ ವ್ಯಕ್ತ ಪಡಿಸಿದ ಸ್ಥಳೀಯ ಎರಡು ಮನೆಗಳ ನಿವಾಸಿಗಳು ಪಡುಬಿದ್ರಿ ಗ್ರಾ.ಪಂ.ಗೆ ತೆರಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ನಾವು ನೀಡಿದ ಆಕ್ಷೇಪ ಪತ್ರ ಹಿಂಪಡೆಯುವ ಬಗ್ಗೆ ಲಿಖಿತವಾಗಿ ಉಲ್ಲೇಖ ಮಾಡಿದ್ದಾರೆ. ಆ ಬಳಿಕ ಮಾತನಾಡಿದ ಅವರು, ಧರ್ಮ ಯಾವುದೇ ಇರಲಿ ನಮಗೂ ಆ ಕ್ಷೇತ್ರದ ಬಗ್ಗೆ ಗೌರವವಿದೆ. ನಾವು ಸದಾ ಹೊತ್ತು ಆ ಕ್ಷೇತ್ರದ ಪಕ್ಕದಲ್ಲೇ ವಾಸ ಮಾಡುವವರು, ನಾವು ಅದೆಷ್ಟೋ ಬಾರಿ ಆ ಪರಿಸರವನ್ನು ಗುಡಿಸಿ ಶುದ್ಧಿಕರಿಸುತ್ತಿರುವುದು ಆ ಗೌರವದಿದಂಲೇ, ಆದರೆ ಇತ್ತೀಚಿನ ದಿನಗಳಲ್ಲಿ ಏಕಾಏಕಿ ಯಾರ ಗಮನಕ್ಕೂ ತಾರದೆ ಗ್ರಾ.ಪಂ. ರಸ್ತೆಗೆ ಮೇಲ್ಛಾವಣಿ ನಿರ್ಮಾಣ ಮಾಡುವ ಅವರ ನಿರ್ಧಾರದ ವಿರುದ್ಧ ಗ್ರಾ.ಪಂ.ಗೆ ಯಾರ...ಯಾವ ಸಂಘಟನೆಯ ಅನುಮತಿಯನ್ನು ಕೇಳದೆ ನಮಗೆ ಮುಂದೆ ಒದಗ ಬಹುದಾದ ಸಮಸ್ಯೆಯನ್ನು ಮನಗಂಡು ಆಕ್ಷೇಪ ಪತ್ರ ಸಲ್ಲಿಸಿದ್ದೇವೆ.
ಬಳಿಕ ಠಾಣೆಯಲ್ಲಿ ನಡೆದ ಸಭೆಯಲ್ಲೂ ನಮ್ಮ ನಿರ್ಧಾರ ವ್ಯಕ್ತ ಪಡಿಸಿದ್ದೇವೆ. ಈ ವಿಚಾರವಾಗಿ ಏನೇ ನಡೆದ್ದರೂ ಅದು ನಮ್ಮ ಎರಡು ಮನೆಗಳ ವೈಯಕ್ತಿಕ ವಿಚಾರವೇ ವಿನಃ ಯಾವುದೇ ನಮ್ಮ ಸಮೂದಾಯದ ಸಂಘಟನೆಗಳಾಗಲೀ ವ್ಯಕ್ತಿಗಳಾಗಲೀ ಇದರಲ್ಲಿ ಬಾಗಿಯಾಗಿಲ್ಲ. ಇದು ಗ್ರಾ.ಪಂ.ಗೆ ಸೇರಿದ ರಸ್ತೆಯಾಗಿದ್ದುಇದರಿಂದ ಸಮಸ್ಯೆಯಾದರೆ ಎಲ್ಲರಿಗೂ ಆಗುತ್ತೆ. ಆ ನಿಟ್ಟಿನಲ್ಲಿ ನಾವು ನೀಡಿದ ಆಕ್ಷೇಪ ಪತ್ರ ಹಿಂಪಡೆದಿದ್ದು, ಮುಂದೆ ರಸ್ತೆಯನ್ನು ಸೇರಿಸಿ ಮೇಲ್ಛಾವಣಿ ಹಾಕಲು ಅವಕಾಶ ನೀಡಿ ಅದರಿಂದ ಸಮಸ್ಯೆಯಾದರೆ ಗ್ರಾ.ಪಂ. ಜವಾಬ್ದಾರಿ ಎಂದಿದ್ದಾರೆ.
Kshetra Samachara
05/06/2022 10:31 am