ಬಜಪೆ: ಬಜಪೆಯಿಂದ ಕೈಕಂಬಕ್ಕೆ ಸಾಗುವ ಕಜೆಪದವು ಎಂಬಲ್ಲಿ ರಸ್ತೆಯ ಅಂಚಿನ ಉದ್ದಕ್ಕೂ ಕಳೆದ ಕೆಲವು ತಿಂಗಳುಗಳಿಂದ ರಾಶಿ ರಾಶಿ ತ್ಯಾಜ್ಯವು ಸಂಗ್ರಹವಾಗಿ ಕೊಳೆತು ನಾರುತ್ತಿತ್ತು.ಇದರಿಂದ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರ ರು ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ಎದುರಾಗಿತ್ತು. ಇಂತಹ ಕೊಳೆತು ನಾರುವ ತ್ಯಾಜ್ಯದ ರಾಶಿಯ ಬಗ್ಗೆ ಪಬ್ಲಿಕ್ ನೆಕ್ಸ್ಟ್‌ನಲ್ಲಿ ಸುದ್ದಿ ಬಿತ್ತರವಾಗಿತ್ತು. ಸುದ್ದಿ ಬಿತ್ತರವಾದ ಬೆನ್ನಲ್ಲೇ ರಸ್ತೆಯಂಚಿನಲ್ಲಿದ್ದ ರಾಶಿ ರಾಶಿ ತ್ಯಾಜ್ಯವನ್ನು ಸುಡಲಾಗಿದ್ದು, ತಾತ್ಕಲಿಕ ಮುಕ್ತಿ ದೊರೆತಿದೆ.
ಕಜೆಪದವು ರಸ್ತೆಯ ಅಂಚಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ರಸ್ತೆಯಂಚಿನಲ್ಲಿ ತ್ಯಾಜ್ಯದ ರಾಶಿಯು ಹೆಚ್ಚಾಗುತ್ತಲೇ ಇತ್ತು.
Kshetra Samachara
09/05/2022 05:12 pm