ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡು ಗಾಂಧಿ ಮೈದಾನದಲ್ಲಿ ಮಂಗಳೂರಿನ ಸಿಒಡಿಪಿ ವತಿಯಿಂದ
ಪರಿಸರಸ್ನೇಹಿ ಸಿಮೆಂಟ್ ಬೆಂಚ್ ನಿರ್ಮಾಣ ನಡೆಯುತ್ತಿದ್ದು ಪ್ಲಾಸ್ಟಿಕ್ ಬಾಟಲ್ ಹಾಗೂ ಸಂಗ್ರಹಿಸಿದ ತ್ಯಾಜ್ಯವನ್ನು ಉಪಯೋಗಿಸಿ ಭರದಿಂದ ಕೆಲಸ ನಡೆಯುತ್ತಿದೆ.
ಈ ಬಗ್ಗೆ ಮಂಗಳೂರಿನ ಕ್ಯಾನ್ಸರ್ ಆರ್ಗನೈಸೇಷನ್ ಫಾರ್ ದೆವಲಪ್ಮೆಂಟ್ ಅಂಡ್ ಪೀಸ್ ನ ಪುಷ್ಪವೇಣಿ ಮಾತನಾಡಿ, ಪ್ರತಿ ಮನೆಗೆ ತೆರಳಿ ಜನರಿಗೆ ಪ್ಲಾಸ್ಟಿಕ್ ನಿಂದ ಆಗುವ ಅನಾಹುತದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 19 ಕಡೆ ಪರಿಸರಸ್ನೇಹಿ ಬೆಂಚ್ ನಿರ್ಮಾಣ ನಡೆದಿದೆ.
ಪ್ಲಾಸ್ಟಿಕ್ ಬಾಟಲಿ ಹಾಗೂ ತ್ಯಾಜ್ಯಗಳನ್ನು ಎಸೆಯುವ ಹಾಗೂ ಹೊತ್ತಿಸುವ ಬಗ್ಗೆ ಪ್ರತಿ ಮನೆಗೆ ತೆರಳಿ ಜಾಗೃತಿ ಮೂಡಿಸುವ ಯತ್ನ ಹಾಗೂ ಪ್ಲಾಸ್ಟಿಕ್ ಗಳನ್ನು ರಿಸೈಕ್ಲಿಂಗ್, ಪುನಹ ಉಪಯೋಗಿಸುವ, ಬಟ್ಟೆ ನಿರ್ಮಾಣದ ವಸ್ತುಗಳಿಗೆ ಆದ್ಯತೆ, ಸಾವಯವ ಕೃಷಿಗೆ ಒತ್ತು ನೀಡುವ ಕೆಲಸವಾಗುತ್ತಿದ್ದು ಸ್ನೇಹ ಒಕ್ಕೂಟದ ಅಧ್ಯಕ್ಷ ಮೆಲ್ವಿನ್ ಡಿ ಅಲ್ಮೇಡಾ, ಮಾಜಿ ಅಧ್ಯಕ್ಷ ರಾಕಿ ಸಲ್ದಾನ ನಮಗೆ ಸಹಕಾರ ನೀಡುತ್ತಿದ್ದಾರೆ.
ಪರಿಸರಸ್ನೇಹಿ ಬೆಂಚ್ ನಿರ್ಮಾಣದಿಂದ ಸಂಜೆ ಹೊತ್ತು ವಾಯುವಿಹಾರಕ್ಕೆ ಬರುವವರು ಕುಳಿತುಕೊಳ್ಳಲು ಅನುಕೂಲವಾಗಿದೆ ಎಂದರು.
PublicNext
28/04/2022 09:22 am