ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ : "ಗ್ರಾಮವಾಸ್ತವ್ಯದ ಮೂಲಕ ಜನರ ಸಮಸ್ಯೆ ಬಗೆಹರಿಸಲು ಪ್ರಯತ್ನ"

ಕಿನ್ನಿಗೋಳಿ: ಜನರ ಕಂದಾಯ ಅಥವಾ ಯಾವುದೇ ಸಮಸ್ಯೆಗಳನ್ನು ಗ್ರಾಮ ವಾಸ್ತವ್ಯದ ಮೂಲಕ ಸರಿಪಡಿಸಬಹುದಾಗಿದೆ ಎಂದು ಮುಲ್ಕಿ ತಹಶೀಲ್ದಾರ್ ಗುರುಪ್ರಸಾದ್ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮುಲ್ಕಿ ತಾಲೂಕು, ಮುಲ್ಕಿ ತಾಲೂಕಿನ ವಿವಿಧ ಇಲಾಖೆಯ ಇಲಾಖಾಧಿಕಾರಿಗಳೊಂದಿಗೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬ್ರಾಮರಿ ಸಭಾಭವನದಲ್ಲಿ ಗ್ರಾಮ ವಾಸ್ತವ್ಯವನ್ನು ಉದ್ಘಾಟಿಸಿ ಮಾತನಾಡಿದರು.

ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗೆ ವಾಸ್ತವ್ಯಕ್ಕಾಗಿ ಹಲವು ಮನವಿಗಳು ಬಂದಿದ್ದು 7 ಎಕ್ಕರೆ ಜಮೀನಿನಲ್ಲಿ ವಾಸ್ತವ್ಯ ಸಹಿತರಿಗೆ ನಿವೇಶನ ನಿಡಲಾಗುವುದು ಎಂದರು.

ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಹಿಷ್ ಚೌಟ ಮಾತನಾಡಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ 283 ವಾಸವ್ಯ ರಹಿತರು ಅರ್ಜಿ ಸಲ್ಲಿಸಿದ್ದಾರೆ. ಬೀದಿ ದೀಪ, ಕುಡಿಯುವ ನೀರು ಮತ್ತಿತರ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಹರಿಸಲಾಗಿದೆ ಎಂದರು

ಈ ಸಂದರ್ಭ ಕಂದಾಯ ನಿರೀಕ್ಷಕ ದಿನೇಶ್, ಗ್ರಾಮಕರಣಿಕ ಸುಜಿತ್ ಪಂಚಾಯತ್ ಮತ್ತು ತಾಲೂಕು ಸಿಂಬಂದಿಗಳು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

19/04/2022 08:03 pm

Cinque Terre

5 K

Cinque Terre

0

ಸಂಬಂಧಿತ ಸುದ್ದಿ